ADVERTISEMENT

ಭಾರತಕ್ಕೆ ಹೀನಾಯ ಸೋಲು

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 10:20 IST
Last Updated 15 ಜನವರಿ 2012, 10:20 IST

ಪರ್ತ್ (ಪಿಟಿಐ/ಐಎಎನ್‌ಎಸ್): ಆಸ್ಟ್ರೇಲಿಯಾ ವಿರುದ್ಧದ ತೃತೀಯ ಟೆಸ್ಟ್‌ನಲ್ಲಿ ಭಾರತ ಇಳಿದದ್ದು ಪಾತಾಳಕ್ಕೆ. ಬರೀ ಸೋಲಲ್ಲ ಅತ್ಯಂತ ಹೀನಾಯ ಸೋಲು.

ಹೌದು, ಕೇವಲ 2ವರೆ ದಿನದಲ್ಲಿ ಇನಿಂಗ್ಸ್ ಹಾಗೂ 37 ರನ್‌ಗಳ ಸೋಲುಂಡ ಭಾರತಕ್ಕೆ ವಿದೇಶದಲ್ಲಿ ಇದು ಸತತ 7ನೇ ಸೋಲು ಮಾತ್ರವಲ್ಲ ಸತತ ಎರಡನೇ ಟೆಸ್ಟ್ ಸರಣಿ ಸೋಲು ಕೂಡ !

ಭಾನುವಾರ ಬೆಳಿಗ್ಗೆ ದೋನಿ ಪಡೆ ತನ್ನ ಎರಡನೇ ಇನಿಂಗ್ಸ್‌ನ ಭೋಜನ ವಿರಾಮದ ವೇಳೆಗೆ  6 ವಿಕೆಟ್ ಕಳೆದುಕೊಂಡಿತ್ತು. ಆದರೆ ಕಡೆಯ ನಾಲ್ವರು ಬ್ಯಾಟ್ಸ್‌ಮನ್‌ಗಳು ಕೇವಲ 7 ಎಸೆತಗಳಲ್ಲೆ ತಮ್ಮಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಪರೇಡ್ ಮಾಡಿದರು.

ಮೊದಲ ಇನಿಂಗ್ಸ್‌ನಲ್ಲಿ ಭಾರತ ಗಳಿಸಿದ್ದು, 161 ರನ್ ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ ಗಳಿಸಿದ್ದು 369 ಇದಕ್ಕೆ ಪ್ರತಿಯಾಗಿ ಎರಡನೇ ಇನಿಂಗ್ಸ್‌ನಲ್ಲಿ ಭಾರತ ಗಳಿಸಿದ್ದು ಕೇವಲ 171.

ವಿರಾಟ್‌ಕೊಹ್ಲಿ 75 ಹಾಗೂ ರಾಹುಲ್‌ದ್ರಾವಿಡ್ 47 ರನ್ ಗಳಿಸಿ ಹೋರಾಡಿದ್ದು ವ್ಯರ್ಥವೆನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.