ADVERTISEMENT

ಭಾರತದ ಕ್ವಾರ್ಟರ್‌ಫೈನಲ್ ಎದುರಾಳಿ ಆಸ್ಟ್ರೇಲಿಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 19:30 IST
Last Updated 20 ಮಾರ್ಚ್ 2011, 19:30 IST

ಚೆನ್ನೈ:  ಹತ್ತನೇ ವಿಶ್ವ ಕಪ್ ಗೆಲ್ಲುವ ‘ಫೇವರಿಟ್’ ತಂಡ ಎನಿಸಿಕೊಂಡಿರುವ ಭಾರತ ಕ್ವಾರ್ಟರ್‌ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸುವ ಆತಂಕದಲ್ಲಿತ್ತು. ಪಾಕಿಸ್ತಾನ ತಂಡ ಆಸ್ಟ್ರೇಲಿಯವನ್ನು ಸೋಲಿಸಿ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರುವುದರೊಂದಿಗೆ ಅದು ದೂರವಾಯಿತು. ಭಾನುವಾರ ವೆಸ್ಟ್‌ಇಂಡೀಸ್ ವಿರುದ್ಧದ ‘ಬಿ’ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಗೆದ್ದು, ಒಂಬತ್ತು ಪಾಯಿಂಟುಗಳೊಡನೆ ಎರಡನೇ ಸ್ಥಾನ ಪಡೆದ ಭಾರತ, ಮಾರ್ಚ್ 24 ರಂದು ಅಹ್ಮದಾಬಾದ್‌ನಲ್ಲಿ ನಡೆಯುವ ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸುವುದು. ವೆಸ್ಟ್‌ಇಂಡೀಸ್ ಗುಂಪಿನಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಬಾಂಗ್ಲಾದೇಶವೂ ಆರು ಪಾಯಿಂಟ್ಸ್ ಹೊಂದಿದೆಯಾದರೂ, ರನ್ ಸರಾಸರಿಯಲ್ಲಿ ಮುಂದಿರುವುದರಿಂದ ಎಂಟರ ಹಂತಕ್ಕೆ ಮುನ್ನಡೆಯಿತು.

ವೆಸ್ಟ್‌ಇಂಡೀಸ್ ಕ್ವಾರ್ಟರ್‌ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಮೊದಲ ಮತ್ತು ಎರಡನೇ ಕ್ವಾರ್ಟರ್‌ಫೈನಲ್ ವಿಜೇತರು ಸೆಮಿಫೈನಲ್‌ನಲ್ಲಿ ಎದುರಾಳಿಯಾಗಲಿದ್ದಾರೆ. ಅಂದರೆ ಮಾರ್ಚ್ 23 ರಂದು ಪಾಕಿಸ್ತಾನ ಗೆದ್ದಲ್ಲಿ ಹಾಗೂ 24 ರಂದು ಭಾರತ ಜಯಗಳಿಸಿದಲ್ಲಿ, ಚಂಡೀಗಢದಲ್ಲಿ ಮಾರ್ಚ್ 30 ರಂದು ಈ ಎರಡೂ ತಂಡಗಳ ನಡುವೆ ಸೆಮಿಫೈನಲ್ ಸೆಣಸಾಟ ನಡೆಯಲಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.