ADVERTISEMENT

ಭಾರತ ತಂಡಕ್ಕೆ ಜಯ

ಚುಟುಕು ಗುಟುಕು

​ಪ್ರಜಾವಾಣಿ ವಾರ್ತೆ
Published 2 ಜೂನ್ 2013, 19:59 IST
Last Updated 2 ಜೂನ್ 2013, 19:59 IST

ಭಾರತ ತಂಡಕ್ಕೆ ಜಯ
ನವದೆಹಲಿ (ಐಎಎನ್‌ಎಸ್):ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಫಿಬಾ (ಎಫ್‌ಐಬಿಎ) ಏಷ್ಯಾ ಚಾಂಪಿಯನ್‌ಷಿಪ್‌ನ ಬಾಸ್ಕೆಟ್ ಬಾಲ್ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಇಲ್ಲಿನ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ 109-26ರಲ್ಲಿ ನೆರಯ ನೇಪಾಳ ತಂಡವನ್ನು ಮಣಿಸಿತು.

ಕಾರ್ತಿಕೇಯನ್ ಮಡಿಲಿಗೆ `ಆಟೊ ಜಿಪಿ' ಪ್ರಶಸ್ತಿ
ಸಿಲ್ವರ್‌ಸ್ಟೋನ್ (ಐಎಎನ್‌ಎಸ್): ಭಾರತದ ನಾರಾಯಣ್ ಕಾರ್ತಿಕೇಯನ್ ಶನಿವಾರ ನಡೆದ ಆಟೊ ಗ್ರ್ಯಾನ್ ಪ್ರಿ ರೇಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಈ ರೇಸ್‌ನಲ್ಲಿ ಅವರು ಗೆದ್ದ ಚೊಚ್ಚಲ ಪ್ರಶಸ್ತಿ.

ಇಲ್ಲಿನ ಸಿಲ್ವರ್ ಸ್ಟೋನ್ ಸರ್ಕಿಟ್‌ನಲ್ಲಿ ನಡೆದ ಈ ರೇಸ್‌ನಲ್ಲಿ ಅಡಚಣೆ ಉಂಟು ಮಾಡಿದ್ದಕ್ಕಾಗಿ ಲಿಕೆವಿನ್ ಗಿಯೊವೆಸಿ ಅವರಿಗೆ ದಂಡ ವಿಧಿಸಲಾಯಿತು. ಘಿಂಜೈ ಮೋಟೊ   ಸ್ಪೋರ್ಟ್ಸ್‌ನ ಗಿಯೊವೆಸಿಗೆ ಸರಣಿಯ ನಾಲ್ಕನೇ  ಸುತ್ತಾದ 14ನೇ ಲ್ಯಾಪ್‌ನಲ್ಲಿ ನಿಯಮ ಮುರಿದ ಕಾರಣ ದಂಡ ವಿಧಿಸಲಾಗಿತ್ತು. ಆದ್ದರಿಂದ ಕಾರ್ತಿಕೇಯನ್ ಅವರನ್ನು ಜಯಶೀಲರನ್ನಾಗಿ ಘೋಷಿಲಾಗಿದೆ.

`ಅಭ್ಯಾಸ ಹಾಗೂ ಅರ್ಹತಾ ರೇಸ್‌ನಲ್ಲಿ ನಿಖರ ವೇಗ ಕಾಯ್ದುಕೊಂಡೆವೆ. ಗಿಯೊವೆಸಿ ಅಂತಿಮ ಗುರಿಯಡೆಗೆ ಚಲಿಸುವವರೆಗೂ ನಾನು ಮುಂಚೂಣಿಯಲ್ಲಿದ್ದೆ. ಆದರೆ ಅಂತಿಮ ಲ್ಯಾಪ್‌ನಲ್ಲಿ ನಿಯಮ ಉಲ್ಲಂಘಿಸುವ ಮೂಲಕ ಅವರು ತಪ್ಪು ಮಾಡಿದರು' ಎಂದು ಕಾರ್ತಿಕೇಯನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.