ADVERTISEMENT

ಮಂಗಳೂರು ವಿವಿಗೆ 2ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 19:59 IST
Last Updated 18 ಡಿಸೆಂಬರ್ 2012, 19:59 IST
ವಾರಂಗಲ್‌ನಲ್ಲಿ ನಡೆದ ಅಖಿಲ ಭಾರತ ಅಂತರ ವಾರ್ಸಿಟಿ ಮಹಿಳಾ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್‌ಅಪ್ ಸ್ಥಾನ ಪಡೆದ ಮಂಗಳೂರು ವಿ.ವಿ. ತಂಡ. ಎಡದಿಂದ (ಕುಳಿತಿರುವವರು) ಬಿ.ಟಿ.ಬೀನಾ, ಕೆ.ಎಂ.ಪಯಸ್ವಿನಿ, ಎಂ.ಕೆ.ಸವಿತಾ, ಎಂ.ಆರ್.ಕಾವ್ಯಾ, (ನಿಂತಿರುವವರು) ಕೆ.ಪಿ.ಸ್ವಪ್ನಶ್ರೀ, ಎಂ.ಎಂ.ಕಾವ್ಯಾ, ಎಂ.ಪಿ.ರಂಜಿತಾ, ಜಿ.ಎಸ್.ಪೂರ್ಣಿಮಾ, ಎ.ಆರ್‌ಶ್ರುತಿ,  ಎಂ.ಆರ್.ನಿವೇದಿತಾ

ಬೆಂಗಳೂರು: ಮಂಗಳೂರು ವಿಶ್ವವಿದ್ಯಾಲಯ ತಂಡದವರು ಆಂಧ್ರಪ್ರದೇಶದ ವಾರಂಗಲ್‌ನ ಎನ್‌ಐಟಿ ವಿವಿ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್‌ಅಪ್ ಸ್ಥಾನ ಪಡೆದುಕೊಂಡರು.

ಮಂಗಳೂರು ವಿವಿ ಎಂಟರಘಟ್ಟದಲ್ಲಿ ಚೆನ್ನೈಯ ಬಿ ಎಸ್ ಅಬ್ದುಲ್ ರೆಹಮಾನ್ ವಿವಿ ತಂಡದ ವಿರುದ್ಧ 29-21, 29-08ರಿಂದ ಗೆದ್ದಿತು. ಸೆಮಿಫೈನಲ್ ಲೀಗ್‌ನ ಮೊದಲ ಎರಡು ಪಂದ್ಯಗಳಲ್ಲಿ ಚೆನ್ನೈಯ ಅಣ್ಣಾ ವಿವಿ ತಂಡದ ವಿರುದ್ಧ 29-22, 22-29, 29-24ರಿಂದ ಗೆದ್ದರೆ, ಮದ್ರಾಸ್ ವಿವಿ ಎದುರು 29-16, 29-06ರಿಂದ ಸುಲಭವಾಗಿ ಜಯ ಸಾಧಿಸಿದರು. ನಿರ್ಣಾಯಕ ಪಂದ್ಯದಲ್ಲಿ ಮಂಗಳೂರಿನ ವನಿತೆಯರು 27-29, 21-29ರಿಂದ ಶ್ರೀರಾಮಸ್ವಾಮಿ ಮೆಮೋರಿಯಲ್  ವಿವಿ ಎದುರು ಸೋಲನುಭವಿಸಿದರು. ಮೂರೂ ಪಂದ್ಯಗಳಲ್ಲಿ ಗೆದ್ದ ಎಸ್‌ಆರ್‌ಎಂ ಪ್ರಶಸ್ತಿ ಎತ್ತಿಕೊಂಡಿತು.

ಮಂಗಳೂರು ವಿವಿ ಇದು ಸತತ ಒಂಬತ್ತನೇ ವರ್ಷ ಸೆಮಿಫೈನಲ್ ಲೀಗ್ ಪ್ರವೇಶಿಸಿದ್ದಾಗಿದೆ. ಹೀಗಾಗಿ ಹಿಂದೆ 8ಸಲ ಸೆಮಿಫೈನಲ್ ತಲುಪಿದ್ದ ಕೊಟ್ಟಾಯಂನ ಎಂ.ಜಿ.ವಿವಿಯ ದಾಖಲೆಯನ್ನು ಮಂಗಳೂರು ವಿವಿ ಮುರಿಯಿತು. ಮಂಗಳೂರು ಹಿಂದೆ ಮೂರು ಸಲ ಈ ಪ್ರಶಸ್ತಿ ಗೆದ್ದಿದ್ದರೆ, ಮೂರು ಸಲ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಪ್ರಸಕ್ತ ತಂಡದ ಹತ್ತೂ ಮಂದಿ ಆಟಗಾರ್ತಿಯರೂ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸೇರಿದವರು. ಈ ತಂಡಕ್ಕೆ ಪ್ರವೀಣ್ ಕುಮಾರ್ ತರಬೇತುದಾರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.