ADVERTISEMENT

ಮತ್ತೆ ಮಿಂಚಿದ ರಾಬಿನ್

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ಚೆನ್ನೈ (ಐಎಎನ್‌ಎಸ್): ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವು ಪಡೆದರು.

ಗುರುವಾರ ನಡೆದ ಪಂದ್ಯದಲ್ಲಿ ಕರ್ನಾಟಕ 80 ರನ್‌ಗಳಿಂದ ಹೈದರಾಬಾದ್ ವಿರುದ್ಧ ಜಯ ಸಾಧಿಸಿತು. ಕೇವಲ 36 ಎಸೆತಗಳಲ್ಲಿ 92 ರನ್ ಸಿಡಿಸಿದ ನಾಯಕ ರಾಬಿನ್ ಉತ್ತಪ್ಪ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಎಂಟು ಸಿಕ್ಸರ್ ಹಾಗೂ ಅಷ್ಟೇ ಸಂಖ್ಯೆಯ ಬೌಂಡರಿಗಳು ರಾಬಿನ್ ಇನಿಂಗ್ಸ್‌ನಲ್ಲಿ ಒಳಗೊಂಡಿದ್ದವು.
ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಎಂಟು ವಿಕೆಟ್‌ಗೆ 202 ರನ್ ಪೇರಿಸಿತು. ಹೈದರಾಬಾದ್ ತಂಡ 16.5 ಓವರ್‌ಗಳಲ್ಲಿ 122 ರನ್‌ಗಳಿಗೆ ಆಲೌಟಾಯಿತು.

ಸಿ.ಎಂ. ಗೌತಮ್ ಅಜೇಯ 53 ರನ್ ಗಳಿಸಿದರು. ಇದೀಗ ಕರ್ನಾಟಕ ನಾಲ್ಕು ಪಂದ್ಯಗಳಿಂದ 16 ಪಾಯಿಂಟ್ ಕಲೆಹಾಕಿದೆ. ಈ ಮೂಲಕ ದಕ್ಷಿಣ ವಲಯ ಟ್ವೆಂಟಿ-20 ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 202 (ರಾಬಿನ್ ಉತ್ತಪ್ಪ 92, ಗಣೇಶ್ ಸತೀಶ್ 28, ಸಿ.ಎಂ. ಗೌತಮ್ ಔಟಾಗದೆ 53, ಪ್ರಗ್ಯಾನ್ ಓಜಾ 29ಕ್ಕೆ 4). ಹೈದರಾಬಾದ್: 16.5 ಓವರ್‌ಗಳಲ್ಲಿ 122 (ಅಕ್ಷತ್ ರೆಡ್ಡಿ 21, ಅರ್ಜುನ್ ಯಾದವ್ 23, ಆಶೀಶ್ ರೆಡ್ಡಿ ಔಟಾಗದೆ 29, ಕೆ.ಪಿ. ಅಪ್ಪಣ್ಣ 31ಕ್ಕೆ 3, ಎನ್.ಸಿ ಅಯ್ಯಪ್ಪ 14ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.