ADVERTISEMENT

ಮದ್ದು ಸೇವಿಸಿ ಸಿಕ್ಕಿಬಿದ್ದ ಆ್ಯಡ್ರಿಯನ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 19:30 IST
Last Updated 13 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಹಾಕಿ ಗೋಲ್‌ಕೀಪರ್ ಆ್ಯಡ್ರಿಯನ್ ಡಿಸೋಜಾ ಇತ್ತೀಚೆಗೆ ನಡೆದ ವಿಶ್ವ ಹಾಕಿ ಸರಣಿಯಲ್ಲಿ ನಿಷೇಧಿತ ಉದ್ದೀಪನ ಮದ್ದು ಸೇವಿಸಿರುವುದು ಪತ್ತೆಯಾಗಿದೆ.

ಟೂರ್ನಿಯ ವೇಳೆ (ಮಾರ್ಚ್ 21) ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಆ್ಯಡ್ರಿಯನ್ ಅವರ `ಎ~ ಮಾದರಿ ಸಂಗ್ರಹಿಸಿತ್ತು. ಅದರಲ್ಲಿ ಟೆಟ್ರಹೈಡ್ರೋಕ್ಯಾನಬಿನೊಲ್ (ಟಿಎಚ್‌ಸಿ) ಅಂಶ ಇರುವುದು ಗೊತ್ತಾಗಿದೆ.

ಆ್ಯಡ್ರಿಯನ್ ಮುಂಬೈ ಮೇರಿನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಅವರೀಗ `ಬಿ~ ಮಾದರಿ ಪರೀಕ್ಷೆಗಾಗಿ ಮೇಲ್ಮನವಿ ಸಲ್ಲಿಸಬಹುದು. ಅದಕ್ಕೆ ಏಳು ದಿನಗಳ ಅವಕಾಶವಿದೆ. ಮದ್ದು ಸೇವಿಸಿರುವುದು ಆ ಪರೀಕ್ಷೆಯಲ್ಲೂ ಸಾಬೀತಾದರೆ ಕಠಿಣ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.

ಸದ್ಯ ಅವರಿಗೆ ಯಾವುದೇ ಶಿಕ್ಷೆ ವಿಧಿಸಲಾಗಿಲ್ಲ. ಈ ವಿಷಯವನ್ನು ಹಾಕಿ ಇಂಡಿಯಾ, ಅಂತರರಾಷ್ಟ್ರೀಯ ಹಾಕಿ ಫೆಡರೇಷನ್, ವಾಡಾ ಹಾಗೂ ವಿಶ್ವ ಹಾಕಿ ಸರಣಿಯ (ಡಬ್ಲ್ಯುಎಸ್‌ಎಚ್) ಸಂಘಟಕರಿಗೆ ನಾಡಾ ರವಾನಿಸಿದೆ. ಡಬ್ಲ್ಯುಎಸ್‌ಎಚ್ ಫೆಬ್ರುವರಿ 29ರಿಂದ ಏಪ್ರಿಲ್ 2ರವರೆಗೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.