ADVERTISEMENT

ಮಾಜಿ ಫುಟ್‌ಬಾಲ್ ಆಟಗಾರ ಗೋಪಿನಾಥ್ ನಿಧನ

​ಪ್ರಜಾವಾಣಿ ವಾರ್ತೆ
Published 1 ಮೇ 2011, 19:30 IST
Last Updated 1 ಮೇ 2011, 19:30 IST

ಬೆಂಗಳೂರು: ಐಟಿಐ ತಂಡದ ಮಾಜಿ ಹಿರಿಯ ಆಟಗಾರ ಬಿ.ಎಸ್. ಗೋಪಿನಾಥ್ (80) ಬಸವನಗುಡಿಯ ಸ್ವಗೃಹದಲ್ಲಿ ಶನಿವಾರ ನಿಧನರಾದರು.

ಗೋಪಿನಾಥ್ ಅವರು ಪತ್ನಿ, ಮೂವರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವನ್ನು ಅಗಲಿದ್ದಾರೆ. ಇವರು ಉತ್ತಮ ಮಿಡ್ ಫೀಲ್ಡ್ ಆಟಗಾರರಾಗಿದ್ದರು. ಇವರ ನಿಧನಕ್ಕೆ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಸಂತಾಪ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT