ADVERTISEMENT

ಮಾರ್ಟಿನ್ ಕ್ರೋವ್‌ಗೆ ಕ್ಯಾನ್ಸರ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ವೆಲಿಂಗ್ಟನ್ (ಪಿಟಿಐ): ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮಾರ್ಟಿನ್ ಕ್ರೋವ್ ದುಗ್ಧರಸ ಗ್ರಂಥಿಯ ಕ್ಯಾನ್ಸರ್‌ನಿಂದ (ಲಿಂಫೋಮ) ಬಳಲುತ್ತಿದ್ದಾರೆ ಎಂದು ನ್ಯೂಜಿಲೆಂಡ್‌ನ ಪತ್ರಿಕೆ ವರದಿ ಮಾಡಿದೆ.

50 ರ ಹರೆಯದ ಕ್ರೋವ್ ಅವರಿಗೆ ಕ್ಯಾನ್ಸರ್ ಇರುವುದು ಇತ್ತೀಚೆಗಷ್ಟೇ ಪತ್ತೆಯಾಗಿದೆ ಎಂದು ಅವರ ಮ್ಯಾನೇಜರ್ ಲೂಯಿಸ್ ಹ್ಯಾಂಡರ್‌ಸನ್ ನುಡಿದದ್ದಾಗಿ ವರದಿ ತಿಳಿಸಿದೆ. ಇದರಿಂದ ಅವರ ಕುಟುಂಬ ಸದಸ್ಯರು ಆಘಾತಕ್ಕೆ ಒಳಗಾಗಿದ್ದಾರೆ.

ರೋಗ ಯಾವ ಹಂತದಲ್ಲಿದೆ ಎಂಬುದು ಬಹಿರಂಗಗೊಂಡಿಲ್ಲ. ಕೆಲವು ಪತ್ರಿಕೆಗಳು `ಇನ್ನೂ ಆರಂಭಿಕ ಹಂತದಲ್ಲಿದೆ~ ಎಂದಿದೆ. ಹ್ಯಾಂಡರ್‌ಸನ್ ಅವರು ಕ್ರೋವ್ ಪತ್ನಿ ಮಾಜಿ ಭುವನ ಸುಂದರಿ ಲೊರೇನ್ ಡೌನ್ಸ್ ಅವರ ಮ್ಯಾನೇಜರ್ ಕೂಡಾ ಆಗಿರುವರು.

ಬಲಗೈ ಬ್ಯಾಟ್ಸ್‌ಮನ್ ಆಗಿದ್ದ ಕ್ರೋವ್ 77 ಟೆಸ್ಟ್ ಪಂದ್ಯಗಳಿಂದ 5,444 ರನ್ ಹಾಗೂ 143 ಏಕದಿನ ಪಂದ್ಯಗಳಿಂದ 4704 ರನ್‌ಗಳನ್ನು ಪೇರಿಸಿದ್ದಾರೆ. ಅವರು 1982 ರಿಂದ 1995ರ ವರೆಗೆ ಕಿವೀಸ್ ತಂಡವನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.