ಕಾರ್ಡಿಫ್ (ಪಿಟಿಐ): ದಿನೇಶ್ ಕಾರ್ತಿಕ್ (ಅಜೇಯ 146) ಸಿಡಿಸಿದ ಭರ್ಜರಿ ಶತಕ ಮತ್ತು ಉಮೇಶ್ ಯಾದವ್ ತೋರಿದ ಸಮರ್ಥ ಬೌಲಿಂಗ್ ನೆರವಿನಿಂದ ಭಾರತ ತಂಡ ಅಭ್ಯಾಸ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೆಲಿಯಾ ವಿರುದ್ಧ 243 ರನ್‌ಗಳ ಭಾರಿ ಅಂತರದ ಜಯ ಸಾಧಿಸಿತು.
ಸೋಫಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 308 ರನ್ ಪೇರಿಸಿದರೆ, ಎದುರಾಳಿ ತಂಡ 23.3 ಓವರ್‌ಗಳಲ್ಲಿ ಕೇವಲ 65 ರನ್‌ಗಳಿಗೆ ಆಲೌಟಾಯಿತು. ಉಮೇಶ್ ಯಾದವ್ (18ಕ್ಕೆ5) ಮತ್ತು ಇಶಾಂತ್ ಶರ್ಮ (11ಕ್ಕೆ 3) ಅವರ ಮಾರಕ ಬೌಲಿಂಗ್ ಆಸೀಸ್ ಪತನಕ್ಕೆ ಕಾರಣವಾಯಿತು.
ಟಾಸ್ ಗೆದ್ದ ದೋನಿ ಬ್ಯಾಟಿಂಗ್ ಆಯ್ದುಕೊಂಡರು. ಭಾರತ ತಂಡದ ಆರಂಭ ಆಘಾತಕಾರಿಯಾಗಿತ್ತು. 55 ರನ್ ಗಳಿಸುವಷ್ಟರಲ್ಲಿ 5 ವಿಕೆಟ್‌ಗಳ ಉರುಳಿದ್ದವು. ಆದರೆ ಕಾರ್ತಿಕ್ (ಅಜೇಯ 146, 140 ಎಸೆತ, 17 ಬೌಂ, 1 ಸಿಕ್ಸರ್) ಮತ್ತು ದೋನಿ (91, 77 ಎ, 6 ಬೌಂ, 4 ಸಿ.) ಆರನೇ ವಿಕೆಟ್‌ಗೆ 211 ರನ್ ಸೇರಿಸಿದ ಕಾರಣ ಸವಾಲಿನ ಮೊತ್ತ ಪೇರಿಸಿತು.
ಈ ಗುರಿ ಬೆನ್ನಟ್ಟಿದ ಆಸೀಸ್ ತಂಡದ ಬ್ಯಾಟ್ಸ್‌ಮನ್‌ಗಳು ಪೂರ್ಣ ವೈಫಲ್ಯ ಅನುಭವಿಸಿದರು. ಹ್ಯೂಸ್ (14) ಮತ್ತು ಆ್ಯಡಮ್ ವೋಗ್ಸ್ (23) ಮಾತ್ರ ಎರಡಂಕಿಯ ಮೊತ್ತ ತಲುಪಿದರು. ಉಮೇಶ್ ಅವರ ಮಾರಕ ಬೌಲಿಂಗ್ ದಾಳಿಯ ಮುಂದೆ ಎದುರಾಳಿ ತಂಡದ ದಿಕ್ಕುತಪ್ಪಿತು.
ಸ್ಕೋರ್ ವಿವರ
ಭಾರತ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 308
ಮುರಳಿ ವಿಜಯ್ ಎಲ್‌ಬಿಡಬ್ಲ್ಯು ಬಿ ಮಿಷೆಲ್ ಸ್ಟಾರ್ಕ್ 01
ಧವನ್ ಸಿ ಮೆಕೇ ಬಿ ಮಿಷೆಲ್ ಜಾನ್ಸನ್ 17
ಕೊಹ್ಲಿ ಸಿ ವೇಡ್ ಬಿ ಮಿಷೆಲ್ ಸ್ಟಾರ್ಕ್ 09
ರೋಹಿತ್ ಶರ್ಮ ಬಿ ಕ್ಲಿಂಟ್ ಮೆಕೇ 10
ಸುರೇಶ್ ರೈನಾ ಬಿ ಕ್ಲಿಂಟ್ ಮೆಕೇ 00
ದಿನೇಶ್ ಕಾರ್ತಿಕ್ ಔಟಾಗದೆ 146
ದೋನಿ ಸಿ ಜಾನ್ಸನ್ ಬಿ ಫಾಕ್ನರ್ 91
ರವೀಂದ್ರ ಜಡೇಜ ಔಟಾಗದೆ 14
ಇತರೆ (ಬೈ-4, ಲೆಗ್‌ಬೈ-2, ವೈಡ್-13, ನೋಬಾಲ್-1) 20
ವಿಕೆಟ್ ಪತನ: 1-4 (ವಿಜಯ್; 2.1), 2-15 (ಕೊಹ್ಲಿ; 4.3), 3-39 (ರೋಹಿತ್; 9.2), 4-39 (ರೈನಾ; 9.6), 5-55 (ಧವನ್; 16.1), 6-266 (ದೋನಿ; 46.3)
ಬೌಲಿಂಗ್: ಮಿಷೆಲ್ ಸ್ಟಾರ್ಕ್ 10-0-73-2, ಕ್ಲಿಂಟ್ ಮೆಕೇ 10-0-39-2, ಮಿಷೆಲ್ ಜಾನ್ಸನ್ 10-0-51-2, ಜೇಮ್ಸ ಫಾಕ್ನರ್ 10-0-68-1, ಶೇನ್ ವಾಟ್ಸನ್ 5-0-23-0, ಮಿಷೆಲ್ ಮಾರ್ಷ್ 5-0-47-0
ಆಸ್ಟ್ರೇಲಿಯಾ: 23.3 ಓವರ್‌ಗಳಲ್ಲಿ 65
ಮ್ಯಾಥ್ಯೂ ವೇಡ್ ಬಿ ಉಮೇಶ್ ಯಾದವ್ 05
ಡೇವಿಡ್ ವಾರ್ನರ್ ಸಿ ಅಶ್ವಿನ್ ಬಿ ಉಮೇಶ್ ಯಾದವ್ 00
ಫಿಲ್ ಹ್ಯೂಸ್ ಬಿ ಉಮೇಶ್ ಯಾದವ್ 14
ಜಾರ್ಜ್ ಬೈಲಿ ಬಿ ಉಮೇಶ್ ಯಾದವ್ 01
ಆ್ಯಡಮ್ ವೋಗ್ಸ್ ಬಿ ಆರ್. ಅಶ್ವಿನ್ 23
ಮಿಷೆಲ್ ಮಾರ್ಷ್ ಸಿ ದೋನಿ ಬಿ ಉಮೇಶ್ ಯಾದವ್ 00
ಶೇನ್ ವಾಟ್ಸನ್ ಬಿ ಇಶಾಂತ್ ಶರ್ಮ 04
ಜೇಮ್ಸ ಫಾಕ್ನರ್ ಎಲ್‌ಬಿಡಬ್ಲ್ಯು ಬಿ ಇಶಾಂತ್ ಶರ್ಮ 07
ಮಿಷೆಲ್ ಜಾನ್ಸನ್ ಬಿ ಇಶಾಂತ್ ಶರ್ಮ 02
ಮಿಷೆಲ್ ಸ್ಟಾರ್ಕ್ ರನೌಟ್ 00
ಕ್ಲಿಂಟ್ ಮೆಕೇ ಔಟಾಗದೆ 04
ಇತರೆ: (ಬೈ-3, ಲೆಗ್‌ಬೈ-1, ವೈಡ್-1) 05
ವಿಕೆಟ್ ಪತನ: 1-6 (ವೇಡ್; 1.2), 2-7 (ವಾರ್ನರ್; 3.4), 3-9 (ಬೈಲಿ; 5.5), 4-28 (ಹ್ಯೂಸ್; 9.3), 5-28 (ಮಾರ್ಷ್; 9.4), 6-34 (ವಾಟ್ಸನ್; 11.4), 7-50 (ಫಾಕ್ನರ್; 17.5), 8-54 (ಜಾನ್ಸನ್; 19.6), 9-60 (ಸ್ಟಾರ್ಕ್; 21.3), 10-65 (ವೋಗ್ಸ್; 23.3)
ಬೌಲಿಂಗ್: ಭುವನೇಶ್ವರ್ ಕುಮಾರ್ 8-1-18-0, ಉಮೇಶ್ ಯಾದವ್ 5-0-18-5, ಇಶಾಂತ್ ಶರ್ಮ 5-0-11-3, ರವೀಂದ್ರ ಜಡೇಜ 4-0-10-0, ಆರ್. ಅಶ್ವಿನ್ 1.3-0-4-1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.