ಮುಂಬೈ (ಪಿಟಿಐ): ಸಚಿನ್ ತೆಂಡೂಲ್ಕರ್ (51; 45 ಎಸೆತ, 3 ಬೌ. 1 ಸಿ.) ಹಾಗೂ ಅಂಬಾಟಿ ರಾಯುಡು (51; 37 ಎಸೆತ, 6 ಬೌ. 1ಸಿ) ಅವರ ಅಮೋಘ ಅರ್ಧ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡದವರು ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಜಯ ಗಳಿಸಿದ್ದಾರೆ.
ವಾಂಖೇಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ 160 ರನ್‌ಗಳ ಗುರಿಗೆ ಉತ್ತರವಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 136 ರನ್ ಗಳಿಸಿತು.
ಈ ಗೆಲುವಿನಿಂದ ಸಚಿನ್ ಸಾರಥ್ಯದ ಮುಂಬೈ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಈ ತಂಡದವರು ಆಡಿದ ಎಂಟು ಪಂದ್ಯಗಳಿಂದ 12 ಪಾಯಿಂಟ್ ಹೊಂದಿದ್ದಾರೆ. ಕಿಂಗ್ಸ್ ಇಲೆವೆನ್ ತಂಡದ ಶಾನ್ ಮಾರ್ಷ್ ನಡೆಸಿದ ಹೋರಾಟ ಫಲ ನೀಡಲಿಲ್ಲ. ಅವರು ಕೇವಲ 47 ಎಸೆತಗಳಲ್ಲಿ ಎಂಟು ಬೌಂಡರಿ ಸಮೇತ 61 ರನ್ ಗಳಿಸಿದರು. ಪಾಲ್ ವಲ್ತಾಟಿ (33; 38 ಎಸೆತ, 1 ಬೌ. 2 ಸಿ.) ಕೊಂಚ ಹೊತ್ತು ಹೋರಾಡಿದರು.
ಈ ಆಟಗಾರರು ಎರಡನೇ ವಿಕೆಟ್‌ಗೆ 72 ರನ್ ಸೇರಿಸಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಮಾರ್ಷ್ ಹಾಗೂ ವಲ್ತಾಟಿ ಔಟ್ ಆದ ಬಳಿಕ ಈ ತಂಡದ ರನ್‌ರೇಟ್ ಕುಸಿತ ಕಂಡಿತು. ಉಳಿದ ಬ್ಯಾಟ್ಸ್‌ಮನ್‌ಗಳು ನಡೆಸಿದ ಪ್ರಯತ್ನ ಸಾಕಾಗಲಿಲ್ಲ.
ಮುಂಬೈ ಇಂಡಿಯನ್ಸ್ ಬೌಲಿಂಗ್ ಅದ್ಭುತವಾಗಿತ್ತು. ಹರಭಜನ್ ಸಿಂಗ್ ಮೊದಲ ಓವರ್‌ನಲ್ಲಿ ಆ್ಯಡಮ್ ಗಿಲ್‌ಕ್ರಿಸ್ಟ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಮುನಾಫ್ ಪಟೇಲ್ (18ಕ್ಕೆ2), ಲಸಿತ್ ಮಾಲಿಂಗ (19ಕ್ಕೆ2) ಕೂಡ ಮಿಂಚಿದರು. ಪೊಲಾರ್ಡ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದರು. ಹಾಗಾಗಿ ‘ಪಂದ್ಯ ಶ್ರೇಷ್ಠ’ ಗೌರವ ಅವರಿಗೆ ಒಲಿಯಿತು.
ಇದಕ್ಕೂ ಮೊದಲು ಸಚಿನ್ ಹಾಗೂ ರಾಯುಡು ಅವರ ಉತ್ತಮ ಜೊತೆಯಾಟದ ಕಾರಣ ಮುಂಬೈ ಇಂಡಿಯನ್ಸ್ ಸವಾಲಿನ ಮೊತ್ತ ಪೇರಿಸಿತ್ತು. ಇವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 95 ರನ್ ಗಳಿಸಿದರು.
ಕಿರೋನ್ ಪೊಲಾರ್ಡ್ ಹಾಗೂ ರೋಹಿತ್ ಶರ್ಮ ತಂಡದ ಮೊತ್ತ ಹೆಚ್ಚಿಸಿದರು. ಈ ಕಾರಣ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 159 ರನ್ ಗಳಿಸಲು ಸಾಧ್ಯವಾಯಿತು.
ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ
5 ವಿಕೆಟ್ ನಷ್ಟಕ್ಕೆ 159
ಡೇವಿ ಜೇಕಬ್ಸ್ ಬಿ ಬಿಪುಲ್ ಶರ್ಮ 10
ಸಚಿನ್ ಸಿ ಅಭಿಷೇಕ್ ನಾಯರ್ ಬಿ ರ್ಯಾನ್ ಹ್ಯಾರಿಸ್ 51
ರಾಯುಡು ಸಿ ದಿನೇಶ್ ಕಾರ್ತಿಕ್ ಬಿ ಪಿಯೂಷ್ ಚಾವ್ಲಾ 51
ಪೊಲಾರ್ಡ್ ಸಿ ಪಾಲ್ ವಲ್ತಾಟಿ ಬಿ ಪಿಯೂಷ್ ಚಾವ್ಲಾ 20
ರೋಹಿತ್ ಶರ್ಮ ಸಿ ಡೇವಿಡ್ ಹಸ್ಸಿ ಬಿ ರ್ಯಾನ್ ಹ್ಯಾರಿಸ್ 18
ಆ್ಯಂಡ್ರ್ಯೂ ಸೈಮಂಡ್ಸ್ ಔಟಾಗದೆ 04
ಟಿ.ಸುಮನ್ ಔಟಾಗದೆ 00
ಇತರೆ (ಬೈ-2, ಲೆಗ್‌ಬೈ-1, ವೈಡ್-2) 05
ವಿಕೆಟ್ ಪತನ: 1-14 (ಜೇಕಬ್ಸ್; 2.3); 2-109 (ರಾಯುಡು; 14.3); 3-129 (ಸಚಿನ್; 16.2); 4-144 (ಪೊಲಾರ್ಡ್; 17.6); 5-158 (ರೋಹಿತ್; 19.5).
ಬೌಲಿಂಗ್: ಭಾರ್ಗವ್ ಭಟ್ 4-0-26-0, ಪ್ರವೀಣ್ ಕುಮಾರ್ 3-0-28-0, ಬಿಪುಲ್ ಶರ್ಮ 4-0-22-1 (ವೈಡ್-1), ರ್ಯಾನ್ ಹ್ಯಾರಿಸ್ 4-0-33-2, ಪಿಯೂಷ್ ಚಾವ್ಲಾ 4-0-37-2, ಪಾಲ್ ವಲ್ತಾಟಿ 1-0-10-0
ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್‌ಗಳಲ್ಲಿ
8 ವಿಕೆಟ್ ನಷ್ಟಕ್ಕೆ 136
ವಲ್ತಾಟಿ ಸಿ ಕಿರೋನ್ ಪೊಲಾರ್ಡ್ ಬಿ ಆ್ಯಂಡ್ಯೂ ಸೈಮಂಡ್ಸ್ 33
ಗಿಲ್‌ಕ್ರಿಸ್ಟ್ ಎಲ್‌ಬಿಡಬ್ಲ್ಯು ಬಿ ಹರಭಜನ್ ಸಿಂಗ್ 00
ಮಾರ್ಷ್ ಸಿ ಸಚಿನ್ ತೆಂಡೂಲ್ಕರ್ ಬಿ ಲಸಿತ್ ಮಾಲಿಂಗ 61
ಹಸ್ಸಿ ಸಿ ರೋಹಿತ್ ಶರ್ಮ ಬಿ ಮುನಾಫ್ ಪಟೇಲ್ 01
ಕಾರ್ತಿಕ್ ಎಲ್‌ಬಿಡಡಬ್ಲ್ಯು ಬಿ ಕಿರೋನ್ ಪೊಲಾರ್ಡ್ 01
ನಾಯರ್ ಸಿ ಆ್ಯಂಡ್ರ್ಯೂ ಸೈಮಂಡ್ಸ್ ಬಿ ಹರಭಜನ್ ಸಿಂಗ್ 14
ಬಿಪುಲ್ ಶರ್ಮ ಬಿ ಲಸಿತ್ ಮಾಲಿಂಗ 01
ಪಿಯೂಷ್ ಚಾವ್ಲಾ ಔಟಾಗದೆ 10
ರ್ಯಾನ್ ಹ್ಯಾರಿಸ್ ಸಿ ಪೊಲಾರ್ಡ್ ಬಿ ಮುನಾಫ್ ಪಟೇಲ್ 01
ಪ್ರವೀಣ್ ಕುಮಾರ್ ಔಟಾಗದೆ 02
ಇತರೆ (ಬೈ-6, ಲೆಗ್‌ಬೈ-5, ವೈಡ್-1) 12
ವಿಕೆಟ್ ಪತನ: 1-1 (ಗಿಲ್‌ಕ್ರಿಸ್ಟ್; 0.5); 2-73 (ವಲ್ತಾಟಿ; 10.5); 3-79 (ಹಸ್ಸಿ; 12.2); 4-83 (ಕಾರ್ತಿಕ್; 13.2); 5-113 (ನಾಯರ್; 15.6); 6-116 (ಬಿಪುಲ್; 16.4); 7-131 (ಮಾರ್ಷ್; 18.5); 8-132 (ಹ್ಯಾರಿಸ್; 19.1)
ಬೌಲಿಂಗ್: ಹರಭಜನ್ ಸಿಂಗ್ 4-0-25-2, ಲಸಿತ್ ಮಾಲಿಂಗ 4-0-19-2, ಅಬು ನೆಚಿಮ್ 3-0-22-0, ಮುನಾಫ್ ಪಟೇಲ್ 4-0-18-2, ಟಿ.ಸುಮನ್ 1-0-12-0, ಕಿರೋನ್ ಪೊಲಾರ್ಡ್ 3-0-18-1 (ವೈಡ್-1), ಆ್ಯಂಡ್ರ್ಯೂ ಸೈಮಂಡ್ಸ್ 1-0-11-1
ಪಂದ್ಯ ಶ್ರೇಷ್ಠ: ಕಿರೋನ್ ಪೊಲಾರ್ಡ್
ತಂಡ ಪಂದ್ಯ ಗೆಲುವು ಸೋಲು ರದ್ದು ಪಾಯಿಂಟ್ ರನ್‌ರೇಟ್
ಮುಂಬೈ ಇಂಡಿಯನ್ಸ್ 8 6 2 0 12 +0.582
ರಾಜಸ್ತಾನ ರಾಯಲ್ಸ್ 9 5 3 1 11 -0.145
ಕೋಲ್ಕತ್ತ ನೈಟ್‌ರೈಡರ್ಸ್ 8 5 3 0 10 +0.530
ಚೆನ್ನೈ ಸೂಪರ್ ಕಿಂಗ್ಸ್ 8 5 3 0 10 +0.247
ರಾಯಲ್ ಚಾಲೆಂಜರ್ಸ್ 8 4 3 1 9 -0.052
ಕೊಚ್ಚಿ ಟಸ್ಕರ್ಸ್ 9 4 5 0 8 -0.542
ಡೆಕ್ಕನ್ ಚಾರ್ಜರ್ಸ್ 8 3 5 0 6 +0.048
ದೆಹಲಿ ಡೇರ್‌ಡೆವಿಲ್ಸ್ 9 3 6 0 6 -0.262
ಕಿಂಗ್ಸ್ ಇಲೆವೆನ್ ಪಂಜಾಬ್ 7 3 4 0 6 -0.398
ಪುಣೆ ವಾರಿಯರ್ಸ್ 8 2 6 0 4 -0.089
* ಸೋಮವಾರದ ಪಂದ್ಯಗಳ ಅಂತ್ಯಕ್ಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.