ADVERTISEMENT

ಮೂರನೇ ಸುತ್ತಿಗೆ ವಾವ್ರಿಂಕಾ

ಏಜೆನ್ಸೀಸ್
Published 1 ಜೂನ್ 2017, 19:39 IST
Last Updated 1 ಜೂನ್ 2017, 19:39 IST
ಚೆಕ್‌ ರಿಪಬ್ಲಿಕ್‌ನ ಬಾರ್ಬರಾ ಸ್ಟ್ರೈಕೊವಾ ವಿರುದ್ಧದ ಪಂದ್ಯದಲ್ಲಿ ಫ್ರಾನ್ಸ್‌ನ ಅಲೈಜ್ ಕಾರ್ನೆಟ್‌ ಚೆಂಡನ್ನು ಹಿಂದಿರುಗಿಸಿದ ಬಗೆ  -ಎಎಫ್‌ಪಿ ಚಿತ್ರ
ಚೆಕ್‌ ರಿಪಬ್ಲಿಕ್‌ನ ಬಾರ್ಬರಾ ಸ್ಟ್ರೈಕೊವಾ ವಿರುದ್ಧದ ಪಂದ್ಯದಲ್ಲಿ ಫ್ರಾನ್ಸ್‌ನ ಅಲೈಜ್ ಕಾರ್ನೆಟ್‌ ಚೆಂಡನ್ನು ಹಿಂದಿರುಗಿಸಿದ ಬಗೆ -ಎಎಫ್‌ಪಿ ಚಿತ್ರ   

ಪ್ಯಾರಿಸ್: ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ  ಸ್ವಿಟ್ಜರ್‌ಲೆಂಡ್‌ನ ಸ್ಟಾನಿ­ಸ್ಲಾಸ್‌ ವಾವ್ರಿಂಕಾ ಫ್ರೆಂಚ್‌ ಓಪನ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಎರಡನೇ ಸುತ್ತಿನ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ 2015ರಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದ ವಾವ್ರಿಂಕಾ 6–4, 7–6, 7–5ರಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್‌ ಡೊಲ್ಗೊ­ಪೊಲೊವ್‌ ಅವರನ್ನು ಮಣಿಸಿದರು.

ಈ ಮೊದಲು ರ್‍ಯಾಂಕಿಂಗ್‌ನಲ್ಲಿ 20ರೊ­ಳಗಿನ ಸ್ಥಾನ ಹೊಂದಿದ್ದ ಡೊಲ್ಗೊಪೊಲೊವ್‌ ಸ್ವಿಸ್ ಆಟಗಾರನಿಗೆ ಪ್ರಬಲ ಪೈಪೋಟಿ ನೀಡಿದರು.

ADVERTISEMENT

ಉಕ್ರೇನ್‌ನ ಆಟಗಾರ ಆರು ಏಸ್‌ಗಳನ್ನು ಸಿಡಿಸಿದರೆ, ವಾವ್ರಿಂಕಾ 16 ಏಸ್‌ಗಳಿಂದ ಗಮನ ಸೆಳೆದರು.

ಪುರುಷರ ವಿಭಾಗದ ಇತರ ಪಂದ್ಯಗಳಲ್ಲಿ ಜಪಾನ್‌ನ ಎಂಟನೇ ಶ್ರೇಯಾಂಕದ ಆಟಗಾರ ಕೀ ನಿಶಿಕೊರಿ 6–3, 6–0, 7–6ರಲ್ಲಿ ಫ್ರಾನ್ಸ್‌ನ ಜೆರೆಮಿ ಚಾರ್ಡಿ ಮೇಲೂ, ಮರಿನ್ ಸಿಲಿಕ್‌ 6–3, 6–2, 6–2ರಲ್ಲಿ ರಷ್ಯಾದ ಕಾನ್ಸಂಟೈನ್‌ ಕ್ರಾವಚಕ್ ವಿರುದ್ಧವೂ, ಇಟಲಿಯ ಫ್ಯಾಬಿಯೊ ಫೋಗ್ನಿನಿ 6–4, 7–5, 6–3ರಲ್ಲಿ ಆ್ಯಂಡ್ರೆಸ್ ಸೆಪ್ಪಿ ಮೇಲೂ,  ರಷ್ಯಾದ ಕರೆನ್ 7–5, 6–4, 6–4ರಲ್ಲಿ ಥಾಮಸ್ ಬರ್ಡಿಕ್‌ ಎದುರೂ, ಫೆಲಿಸಿಯಾನೊ ಲೊಪೆಜ್‌ 7–5, 3–6, 7–5, 4–6, 6–4ರಲ್ಲಿ ಡೇವಿಡ್ ಫೆರರ್ ಎದುರೂ ಜಯದಾಖಲಿಸಿದರು.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ  ಫ್ರಾನ್ಸ್‌ನ ಕ್ಯಾರೊಲಿನಾ ಗ್ರೇಸಿ 7–5, 6–4ರಲ್ಲಿ ಚೊಲೆ ಪಾಕ್ವೆಟ್ ವಿರುದ್ಧವೂ, ರಷ್ಯಾದ ಎಲೆನಾ ವೆಸ್ನಿನಾ 4–6, 6–3, 6–0ರಲ್ಲಿ ವಾರ್ವರಾ ಲೊಪೆಚೆಂಕೊ ಮೇಲೂ, ಪೋಲೆಂಡ್‌ನ ಅಗ್ನಿಸ್ಕಾ ರಾಂಡ್ವಾಸ್ಕಾ 6–7, 6–2 6–3ರಲ್ಲಿ ಅಲಿಸನ್ ವಾನ್ ಮೇಲೂ, ಫ್ರಾನ್ಸ್‌ನ ಅಲೈಜ್‌ ಕಾರ್ನೆಟ್‌ 6–4, 6–1ರಲ್ಲಿ ಬಾರ್ಬರಾ ಸ್ಟ್ರೆಕೋವಾ ಎದುರೂ ಗೆದ್ದು ಮೂರನೇ ಸುತ್ತು ತಲುಪಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.