ಮೆಲ್ಬರ್ನ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕಿವೀಸ್ ಪಡೆ ಮೂರು ವಿಕೆಟ್ ಕಳೆದುಕೊಂಡಿದೆ.
ಆರಂಭಿಕ ಆಟಗಾರರಾಗಿ ಬಂದ ನಾಯಕ ಬ್ರೆಂಡನ್ ಮೆಕ್ಲಮ್ ಖಾತೆ ತೆರೆಯದೇ ಮಿಷೆಲ್ ಸ್ಟಾರ್ಕ್ ಅವರ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
34 ಬಾಲ್‌ಗಳಲ್ಲಿ 15ರನ್ ಗಳಿಸಿದ್ದ ಮಾರ್ಟಿನ್ ಗುಪ್ಟಿಲ್ ಅವರು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಎಸೆತದಲ್ಲಿ ವಿಕೆಟ್ ಕಳೆದುಕೊಂಡರೆ, ಕೇನ್ ವಿಲಿಯಮ್ಸನ್ 33 ಬಾಲ್‌ಗಳಲ್ಲಿ 12 ರನ್ ಗಳಿಸಿ ಮಿಷೆಲ್ ಜಾನ್ಸನ್ ಅವರ ಎಸೆತಕ್ಕೆ ಕ್ಯಾಚ್ ನೀಡಿದರು.
ನ್ಯೂಜಿಲೆಂಡ್ ಈವರೆಗೆ 13 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.