ADVERTISEMENT

ಮೇ 16ರಂದು ಮೇರಿ ಕೋಮ್‌ ಅಕಾಡೆಮಿ ಉದ್ಘಾಟನೆ

ಪಿಟಿಐ
Published 12 ಮಾರ್ಚ್ 2018, 19:31 IST
Last Updated 12 ಮಾರ್ಚ್ 2018, 19:31 IST
ಮೇರಿ ಕೋಮ್‌
ಮೇರಿ ಕೋಮ್‌   

ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ 16ರಂದು ‘ಮೇರಿ ಕೋಮ್ ರೀಜನಲ್‌ ಬಾಕ್ಸಿಂಗ್ ಫೌಂಡೇಷನ್‌’ ಉದ್ಘಾಟಿಸ
ಲಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಹಾಗೂ ಕುಸ್ತಿಪಟು ಸುಶೀಲ್‌ ಕುಮಾರ್ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊ
ಳ್ಳಲಿದ್ದಾರೆ.

ಇಂಪಾಲದಿಂದ 10ಕಿ.ಮೀ ದೂರದಲ್ಲಿರುವ ಲ್ಯಾಂಗೊಲ್‌ ಬೆಟ್ಟ ಪ್ರದೇಶದ 3.3 ಎಕರೆ ವಿಸ್ತೀರ್ಣದಲ್ಲಿ ಅಕಾಡೆಮಿ ನಿರ್ಮಿಸಲಾಗಿದೆ. ಇದು ಮೂರು ಮಹಡಿ ಕಟ್ಟಡವಾಗಿದೆ. 20 ಮಹಿಳೆಯರು ಸೇರಿದಂತೆ ಇಲ್ಲಿ 45 ಯುವ ಬಾಕ್ಸರ್‌ಗಳು ಇದ್ದಾರೆ.

ADVERTISEMENT

2013ರಲ್ಲಿ ಮಣಿಪುರ ಸರ್ಕಾರ ಅಕಾಡೆಮಿಗಾಗಿ ಭೂಮಿ ಮಂಜೂರು ಮಾಡಿತ್ತು. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ (ಎನ್‌ಎಸ್‌ಡಿಎಫ್‌) ಯಿಂದ ಕಟ್ಟಡ ನಿರ್ಮಾಣಕ್ಕೆ ಧನಸಹಾಯ ನೀಡಲಾಗಿದೆ.

‘ಈ ಅಕಾಡೆಮಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೆರವಿನಿಂದ ಸಾಧ್ಯವಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

35 ವರ್ಷದ ಮೇರಿ ಕೋಮ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಭಾರತದ ಏಕೈಕ ಮಹಿಳಾ ಬಾಕ್ಸರ್‌ ಎನಿಸಿದ್ದಾರೆ. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ಐದು ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.