ADVERTISEMENT

ಮೊದಲ 15 ಓವರ್‌ಗಳು ಮುಖ್ಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 18:25 IST
Last Updated 16 ಫೆಬ್ರುವರಿ 2011, 18:25 IST

ಕೊಲಂಬೋ (ಪಿಟಿಐ):  ‘ಪಂದ್ಯದ ಮೊದಲ 15 ಓವರ್‌ಗಳಲ್ಲಿ ಬೌಲರ್‌ಗಳು ಉತ್ತಮ ಪ್ರದರ್ಶನ ತೋರಬೇಕು. ಅಂದಾಗ ಪಂದ್ಯದ ವೆುೀಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ. ಇದು ಪಂದ್ಯದ ಸೋಲು ಗೆಲುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಶ್ರೀಲಂಕಾ ತಂಡದ ನಾಯಕ ಕುಮಾರ್ ಸಂಗಕ್ಕಾರ ಹೇಳಿದ್ದಾರೆ.

ವೆಸ್ಟ್‌ಇಂಡೀಸ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಗೆಲುವು ಪಡೆದ ನಂತರ ಮಾತನಾಡಿದ ಸಂಗಕ್ಕಾರ, ಇದೊಂದು ಉತ್ತಮ ಗೆಲುವು. ವಿಶ್ವಕಪ್‌ಗೆ ಮುನ್ನ ದೊರೆತ ಈ ಗೆಲುವು ತಂಡದ ಆತ್ಮವಿಶ್ವಾಸ ವನ್ನು ಹೆಚ್ಚಿಸಿದೆ’ ಎಂದು ನುಡಿದರು.

ಅಭ್ಯಾಸ ಪಂದ್ಯದಲ್ಲಿ ತಂಡ ಆರು ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿದ್ದಕ್ಕೆ ಅಸಮಾಧಾನ ವ್ಯಕ್ತಪಡಿ ಸಿದ ನಾಯಕ ಸಂಗಕ್ಕಾರ, ಕೇವಲ ಒಂದು ಅಥವಾ ಎರಡು ವಿಕೆಟ್‌ನ ್ಲಲಿಯೇ ಗೆಲುವು ಸಾಧಿಸಬಹುದಿತ್ತು. ಬ್ಯಾಟ್ಸ್‌ಮನ್‌ಗಳು ಇನ್ನೂ ಉತ್ತಮವಾಗಿ ಆಡಬಹುದಿತ್ತು ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
ವೆಸ್ಟ್‌ಇಂಡೀಸ್ ತಂಡದ ನಾಯಕ ಡೆರ್ರಿನ್ ಸಾಮ್ಮಿ ಮಾತನಾಡಿ, ನಾವು ಮೊದಲ 15 ಓವರ್‌ಗಳಲ್ಲಿ ಉತ್ತಮ ರನ್‌ಗಳನ್ನು ಪೇರಿಸಬೇಕಿತ್ತು. ತಂಡ ಉತ್ತಮ ಆರಂಭವನ್ನು ಪಡೆಯಿತು. ಆದರೆ ಉತ್ತಮ ಮೊತ್ತ ಕಲೆ ಹಾಕುವಲ್ಲಿ ವಿಫಲವಾಯಿತು ಎಂದು ಹೇಳಿದರು.

ತಂಡದ ಕೆಲ ಪ್ರಮುಖ ಆಟಗಾರರು ಬೇಗನೇ ಔಟಾದರು. ಆದರೂ ನಾವು ಆತ್ಮವಿಶ್ವಾಸವನ್ನು ಕಳೆದುಕೊಂಡಿಲ್ಲ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರುವುದಾಗಿ ಅವರು ಭರವಸೆ ನೀಡಿದರು.

‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ವೆಸ್ಟ್ ಇಂಡೀಸ್ ನವದೆಹಲಿಯಲ್ಲಿ ಫೆ. 24ರಂದು ಪ್ರಬಲ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನುಆಡಲಿದೆ. ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲಿ ವಿಶ್ವಕಪ್ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.