ADVERTISEMENT

ಯಾರ ಮುಡಿಗೆ ಸರಣಿ ಜಯದ ಗರಿ?

ಇಂದು ಭಾರತ–ನ್ಯೂಜಿಲೆಂಡ್‌ ನಡುವಣ ಮೂರನೇ ಏಕದಿನ ಪಂದ್ಯ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 19:30 IST
Last Updated 28 ಅಕ್ಟೋಬರ್ 2017, 19:30 IST
ಯಾರ ಮುಡಿಗೆ ಸರಣಿ ಜಯದ ಗರಿ?
ಯಾರ ಮುಡಿಗೆ ಸರಣಿ ಜಯದ ಗರಿ?   

ಕಾನ್ಪುರ: ಆರಂಭಿಕ ಪಂದ್ಯದಲ್ಲಿ ಎದುರಾದ ಸೋಲಿಗೆ ಮುಯ್ಯಿ ತೀರಿಸಿಕೊಂಡು ವಿಶ್ವಾಸದಿಂದ ಬೀಗುತ್ತಿರುವ ಭಾರತ ತಂಡ ಈಗ ಸರಣಿ ಗೆಲುವಿನ ಸಿಹಿ ಸವಿಯಲು ಸನ್ನದ್ಧವಾಗಿದೆ.

ಭಾನುವಾರ ನಡೆಯುವ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬಳಗ ನ್ಯೂಜಿಲೆಂಡ್‌ ಸವಾಲನ್ನು ಮೀರಿ ನಿಲ್ಲುವ ಉತ್ಸಾಹದಲ್ಲಿದೆ.

ಪುಣೆಯಲ್ಲಿ ನಡೆದಿದ್ದ ಎರಡನೇ ಹೋರಾಟದಲ್ಲಿ ಗೆದ್ದು ವಿಶ್ವಾಸವನ್ನು ಮರಳಿ ‍ಪಡೆದಿರುವ ಆತಿಥೇಯರು ಸತತ ಏಳನೇ ಸರಣಿ ಜಯಕ್ಕಾಗಿ ಹಾತೊರೆಯುತ್ತಿದ್ದಾರೆ. ಹಿಂದಿನ ಆರು ಏಕದಿನ ಸರಣಿಗಳನ್ನೂ ಭಾರತ ಗೆದ್ದುಕೊಂಡಿತ್ತು.

ADVERTISEMENT

ಕೊಹ್ಲಿ ಪಡೆಯ ಈ ಸಾಧನೆಗೆ ಗ್ರೀನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ವೇದಿಕೆಯೂ ಸಜ್ಜಾಗಿದೆ. ಈ ಅಂಗಳದಲ್ಲಿ ಮೊದಲ ಬಾರಿಗೆ ಹೊನಲು ಬೆಳಕಿನಲ್ಲಿ ಏಕದಿನ ಪಂದ್ಯ ನಡೆಯುತ್ತಿರುವುದು ವಿಶೇಷ.

ಪುಣೆ ಪಂದ್ಯದಲ್ಲಿ ಕೊಹ್ಲಿ ಬಳಗ ಯೋಜನಾಬದ್ಧವಾಗಿ ಆಡಿತ್ತು. ಭುವ ನೇಶ್ವರ್‌ ಕುಮಾರ್‌ ಮತ್ತು ಜಸ್‌ಪ್ರೀತ್‌ ಬೂಮ್ರಾ ಆರಂಭದಲ್ಲೇ ವಿಕೆಟ್‌ ಕೆಡವಿ ಎದುರಾಳಿ ಬ್ಯಾಟಿಂಗ್‌ ಶಕ್ತಿಗೆ ಬಲವಾದ ಪೆಟ್ಟು ನೀಡಿದ್ದರು. ಕೊನೆಯ ಓವರ್‌’ಗಳಲ್ಲೂ ಇವರು ಹೆಚ್ಚು ರನ್‌ ಬಿಟ್ಟುಕೊಟ್ಟಿರಲಿಲ್ಲ. ಸ್ಪಿನ್ನರ್‌
ಗಳಾದ ಯಜುವೇಂದ್ರ ಚಾಹಲ್‌ ಮತ್ತು ಅಕ್ಷರ್‌ ಪಟೇಲ್‌ ಕೂಡ ಎದುರಾಳಿ ಬ್ಯಾಟ್ಸ್‌ಮನ್‌ಗಳು ರಟ್ಟೆ ಅರಳಿಸದಂತೆ ನೋಡಿಕೊಂಡಿದ್ದರು.

ಬ್ಯಾಟಿಂಗ್‌ನಲ್ಲೂ ಆತಿಥೇಯ ತಂಡ ಬಲಿಷ್ಠವಾಗಿದೆ. ಆರಂ ಭಿಕ ಆಟಗಾರ ಶಿಖರ್‌ ಧವನ್ ಉತ್ತಮ ಲಯದಲ್ಲಿದ್ದಾರೆ. ಈ ಪಂದ್ಯದಲ್ಲಿ ರೋಹಿತ್‌ ಶರ್ಮಾ ಲಯ ಕಂಡು ಕೊಳ್ಳು ವುದು ಅಗತ್ಯ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಕೊಹ್ಲಿ ಸರಣಿ ಯಲ್ಲಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಆರಂಭ: ಮಧ್ಯಾಹ್ನ 1.30.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

3 ಪಂದ್ಯಗಳ ಸರಣಿ 1–1ರಲ್ಲಿ ಸಮಬಲವಾಗಿದೆ

ಕೊಹ್ಲಿ ಈ ಸರಣಿಯಲ್ಲಿ ಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿದ್ದಾರೆ

ಮಾರ್ಟಿನ್‌ ಗ‍ಪ್ಟಿಲ್‌ ಮತ್ತು ಕೇನ್‌ ವಿಲಿಯಮ್ಸನ್‌ ಲಯ ಕಂಡುಕೊಳ್ಳುವ ಅವಶ್ಯಕತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.