ADVERTISEMENT

ಯುವಿ, ಭಜ್ಜಿಗೆ ಮನೆ ದಾರಿ

ನಾಗಪುರ ಟೆಸ್ಟ್: ಜಡೇಜಾ ಸ್ಥಾನ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2012, 22:00 IST
Last Updated 9 ಡಿಸೆಂಬರ್ 2012, 22:00 IST

ಕೋಲ್ಕತ್ತ: ಭಾರತ ತಂಡ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಹೀನಾಯವಾಗಿ ಸೋಲು ಕಂಡ ಮೇಲೆ ರಾಷ್ಟ್ರೀಯ ಆಯ್ಕೆ ಸಮಿತಿಗೆ ಬುದ್ಧಿ ಬಂದಿರುವಂತಿದೆ. ಏಕೆಂದರೆ ಕೊನೆಗೂ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಆದರೆ ಅದು ಕೂಡ ಕಾಟಾಚಾರದ ಬದಲಾವಣೆಯಂತಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವೈಫಲ್ಯ ಕಂಡಿರುವ ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್, ಎಡಗೈ ವೇಗಿ ಜಹೀರ್ ಖಾನ್ ಹಾಗೂ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರನ್ನು ಮಾತ್ರ ತಂಡದಿಂದ ಕೈಬಿಡಲಾಗಿದೆ.

ಕೋಲ್ಕತ್ತದಲ್ಲಿ ನಡೆದ ಸರಣಿಯ ಮೂರನೇ ಪಂದ್ಯಕ್ಕೆ ಮುಂಬೈನಲ್ಲಿ ಸೋಲು ಕಂಡ ತಂಡವನ್ನೇ ಉಳಿಸಿಕೊಂಡಿದ್ದ ಕಾರಣ ಟೀಕೆಗೆ ಗುರಿಯಾಗಿದ್ದ ಆಯ್ಕೆದಾರರು ಈ ಮೂರು ಬದಲಾವಣೆ ಮಾಡಿ ತಮ್ಮ ಮುಖ ಉಳಿಸಿಕೊಂಡಿದ್ದಾರೆ. ನಾಗಪುರ ಟೆಸ್ಟ್ ಪಂದ್ಯಕ್ಕೆ ತಂಡ ಇಂತಿದೆ: ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಚೇತೇಶ್ವರ ಪೂಜಾರ, ಆರ್.ಅಶ್ವಿನ್, ಅಶೋಕ್ ದಿಂಡಾ, ಪ್ರಗ್ಯಾನ್ ಓಜಾ, ಅಜಿಂಕ್ಯ ರಹಾನೆ, ಪಿಯೂಷ್ ಚಾವ್ಲಾ, ಇಶಾಂತ್ ಶರ್ಮ, ಮುರಳಿ ವಿಜಯ್ ಹಾಗೂ ಪರ್ವೀಂದರ್ ಅವಾನಾ.

ಟ್ವೆಂಟಿ-20 ಸರಣಿಗೆ ತಂಡ:
ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ಯುವರಾಜ್ ಸಿಂಗ್, ಮನೋಜ್ ತಿವಾರಿ, ಆರ್.ಅಶ್ವಿನ್, ರವೀಂದ್ರ ಜಡೇಜಾ, ಪಿಯೂಷ್ ಚಾವ್ಲಾ, ಅಶೋಕ್ ದಿಂಡಾ, ಭುವನೇಶ್ವರ್  ಕುಮಾರ್, ಎಲ್.ಬಾಲಾಜಿ ಹಾಗೂ ಪರ್ವೀಂದರ್ ಅವಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.