ADVERTISEMENT

ರಣಜಿ ಕ್ರಿಕೆಟ್: ಉಭಯ ತಂಡಗಳ ತಾಲೀಮು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:49 IST
Last Updated 22 ಅಕ್ಟೋಬರ್ 2017, 19:49 IST
ಶಿವಮೊಗ್ಗ ನವಿಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ತಾಲೀಮು ನಡೆಸುತ್ತಿರುವ ಕರ್ನಾಟಕ ಕ್ರಿಕೆಟ್ ತಂಡದ ಆಟಗಾರರು
ಶಿವಮೊಗ್ಗ ನವಿಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ತಾಲೀಮು ನಡೆಸುತ್ತಿರುವ ಕರ್ನಾಟಕ ಕ್ರಿಕೆಟ್ ತಂಡದ ಆಟಗಾರರು   

ಶಿವಮೊಗ್ಗ: ಆತಿಥೇಯ ಕರ್ನಾಟಕ ಹಾಗೂ ಹೈದರಬಾದ್ ಕ್ರಿಕೆಟ್‌ ತಂಡಗಳು ಶಿವಮೊಗ್ಗದ ನವಿಲೆಯಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಭಾನುವಾರ ತಾಲೀಮು ನಡೆಸಿದವು.

ಮಂಗಳವಾರ ಪಂದ್ಯ ಪ್ರಾರಂಭವಾಗಲಿದೆ.  ಭಾನುವಾರ ಬೆಳಿಗ್ಗೆ 10.30ಕ್ಕೆ ಕ್ರೀಡಾಂಗಣಕ್ಕೆ ಬಂದ ಹೈದರಾಬಾದ್ ಆಟಗಾರರು ಫುಟ್‌ಬಾಲ್‌ ಆಡಿದರು. ತಂಡದ ನಾಯಕ ಅಂಬಟಿ ರಾಯುಡು ಪಿಚ್‌ ಪರಿಶೀಲಿಸಿದರು. ಬಳಿಕ ನೆಟ್ಸ್‌ಗೆ ತೆರಳಿ ಮಧ್ಯಾಹ್ನ 1ರವರೆಗೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಅಭ್ಯಾಸ ನಡೆಸಿದರು. ತಂಡದ ಪ್ರಮುಖ ಸ್ವಿನ್ನರ್ ಪ್ರಗ್ಯಾನ್ ಓಜಾ ನೇತೃತ್ವದ ಬೌಲಿಂಗ್‌ ಪಡೆ ಅಭ್ಯಾಸ ನಡೆಸಿತು.

ಆತ್ವವಿಶ್ವಾಸದಲ್ಲಿ ಆತೀಥೇಯರು: ಮೈಸೂರಿನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಇನಿಂಗ್ಸ್ ಜಯದೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಆಟಗಾರರು ಅ.24ರಿಂದ ಆರಂಭವಾಗುವ ಶಿವಮೊಗ್ಗದಲ್ಲಿನ ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿದ್ದಾರೆ.

ADVERTISEMENT

ಮಧ್ಯಾಹ್ನ 2.30ರ ಸುಮಾರಿಗೆ ಕ್ರೀಡಾಂಗಣಕ್ಕೆ ಬಂದ ರಾಜ್ಯದ ಆಟಗಾರರು ಕಠಿಣ ತಾಲೀಮು ನಡೆಸಿದರು. ತಂಡದ ಪ್ರಮುಖ ಆಟಗಾರ ಕೆ.ಎಲ್.ರಾಹುಲ್ ಅವರನ್ನು ಬಿಟ್ಟು ಉಳಿದೆಲ್ಲ ಆಟಗಾರರು ಕ್ರೀಡಾಂಗಣದಲ್ಲಿ ಬೆವರು ಸುರಿಸಿದರು.

ಆಟಗಾರರ ಮೆಚ್ಚುಗೆ : ಬಿಸಿಸಿಐ ಈ ಬಾರಿಯ ರಣಜಿ ಪಂದ್ಯಗಳಿಗೆ ತಟಸ್ಥ ಕ್ಯುರೇಟರ್‌ಗಳನ್ನು ನೇಮಿಸಿದೆ. ಕರ್ನಾಟಕ- ಹಾಗೂ ಹೈದರಬಾದ್ ನಡುವಣ ಪಂದ್ಯಕ್ಕೆ ಶಿವಮೊಗ್ಗದ ಪಿಚ್ ಸಿದ್ಧಪಡಿಸುವ ಜವಾಬ್ದಾರಿಯನ್ನು ಕೆಎಸ್‌ಸಿಎ ಕ್ಯುರೇಟರ್‌ ಶ್ರೀರಾಮ್‌ ಅವರಿಗೆ ವಹಿಸಲಾಗಿದೆ. ಸ್ಪರ್ಧಾತ್ಮಕ ಪಿಚ್ ಸಿದ್ಧಪಡಿಸಿರುವ  ಬಗ್ಗೆ ಉಭಯ ತಂಡಗಳ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕೆಎಸ್‌ಸಿಎ ಶಿವಮೊಗ್ಗ ವಲಯದ ನಿಮಂತ್ರಕ ಸುಕುಮಾರ್ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ರೀಡಾಂಗಣದ ಸುತ್ತಲೂ ಆಸನಗಳ ಬದಲಾಗಿ ದಿಬ್ಬದ ಆಕಾರದಲ್ಲಿ ವೇದಿಕೆ ಸಿದ್ಧಪಡಿಸಿ ಹಸಿರು ಹುಲ್ಲು ಬೆಳೆಸಲಾಗಿದೆ. ಈ ನೆಲದಲ್ಲಿಯೇ ಪ್ರೇಕ್ಷಕರಿಗೆ ಕೂರುವ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.