ADVERTISEMENT

ರಣಜಿ ಟ್ರೋಫಿಯಲ್ಲಿ ಮೂರೇ ಗುಂಪು ಸಾಕು

ಪಿಟಿಐ
Published 12 ಮಾರ್ಚ್ 2018, 19:36 IST
Last Updated 12 ಮಾರ್ಚ್ 2018, 19:36 IST

ಮುಂಬೈ : ರಜಣಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ತಂಡಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿದರೆ ಸಾಕು ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಕೋರಲು ನಿರ್ಧರಿಸಿವೆ.

ಇಲ್ಲಿ ಸೋಮವಾರ ನಡೆದ ರಾಜ್ಯ ತಂಡಗಳ ಕೋಚ್‌ ಮತ್ತು ನಾಯಕರ ಸಮಾವೇಶದಲ್ಲಿ ಈ ಬೇಡಿಕೆಯನ್ನು ಒಳಗೊಂಡ ಪ್ರಸ್ತಾವವನ್ನು ಸಿದ್ಧಪಡಿಸಲಾಗಿದೆ ಎಂದು ನಾಯಕರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

ಈ ಹಿಂದೆ ತಂಡಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಲಾಗುತ್ತಿತ್ತು. ಟೂರ್ನಿಯ ಇತಿಹಾಸದಲ್ಲೆ ಮೊದಲ ಬಾರಿ ಕಳೆದ ಸಲ ನಾಲ್ಕು ಗುಂಪುಗಳಾಗಿ ತಂಡಗಳನ್ನು ವಿಂಗಡಿಸಲಾಗಿತ್ತು.

ADVERTISEMENT

‘ರಣಜಿ ವೇಳಾಪಟ್ಟಿ, ಅಂಪೈರಿಂಗ್‌ ಮತ್ತಿತರ ವಿಷಯಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಸಲಾಗಿದ್ದು ಮೂರು ಗುಂಪುಗಳು ಸಾಕು ಎಂದು ಒತ್ತಾಯಿಸುವ ನಿರ್ಧಾರ ಕೈಗೊಂಡಿದ್ದೇವೆ. ಹೆಚ್ಚು ಪಂದ್ಯಗಳು ನಡೆದು ಆಟಗಾರರಿಗೆ ಹೆಚ್ಚು ಅವಕಾಶಗಳು ಸಿಗಬೇಕು ಎಂಬ ಉದ್ದೇಶ ನಮ್ಮದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.