ADVERTISEMENT

ರಾಮ್ದಿನ್‌ಗೆ ಅಮಾನತು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 19:59 IST
Last Updated 10 ಜೂನ್ 2013, 19:59 IST

ಲಂಡನ್ (ಪಿಟಿಐ): ವೆಸ್ಟ್ ಇಂಡೀಸ್ ಆಟಗಾರ ದಿನೇಶ್ ರಾಮ್ದಿನ್ ಕ್ರೀಡಾ ಸ್ಪೂರ್ತಿಗೆ ಧಕ್ಕೆ ತರುವಂತೆ ವರ್ತಿಸಿದ ಆರೋಪ ಐಸಿಸಿ ಸೋಮವಾರ ನಡೆಸಿದ ವಿಚಾರಣೆ ವೇಳೆ ಸಾಬೀತಾಗಿದ್ದು, ಅವರಿಗೆ ಎರಡು ಏಕದಿನ ಪಂದ್ಯಗಳಿಂದ ಅಮಾನತು ಮಾಡಲಾಗಿದೆ. ಅಲ್ಲದೇ ಪಂದ್ಯದ ಸಂಭಾವನೆಯ ಶೇ. 100 ರಷ್ಟು ಹಣವನ್ನು ದಂಡ ವಿಧಿಸಲಾಗಿದೆ.

ಅಮಾನತು ಶಿಕ್ಷೆ ಹಿನ್ನೆಲೆ ರಾಮ್ದಿನ್, ಮಂಗಳವಾರ ನಡೆಯಲಿರುವ ಭಾರತ ಹಾಗೂ ಜೂನ್ 14ರಂದು ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಆಡುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.