ADVERTISEMENT

ರಾಷ್ಟ್ರೀಯ ಆಹ್ವಾನ ವಾಲಿಬಾಲ್: ಐಒಬಿ ತಂಡದ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ಪಡುಬಿದ್ರಿ: ಚೆನ್ನೈನ ಪ್ರಬಲ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಐಒಬಿ) ತಂಡ, ಎಲ್ಲೂರು ಯುವಕ ಮಂಡಲದ ಆಶ್ರಯದಲ್ಲಿ ಬುಧವಾರ ಆರಂಭವಾದ ರಾಷ್ಟ್ರೀಯ ಮಟ್ಟದ ಆಹ್ವಾನ ವಾಲಿಬಾಲ್ ಟೂರ್ನಿಯ `ಎ~ ಗುಂಪಿನ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಪೊಲೀಸ್ ತಂಡವನ್ನು ನೇರ ಸೆಟ್‌ಗಳಿಂದ ಸೋಲಿಸಿತು.

ಐಒಬಿ ತಂಡ ಹೊನಲು ಬೆಳಕಿನಡಿ ನಡೆದ ಈ ಪಂದ್ಯದಲ್ಲಿ 25-21, 25-17, 27-25ರಲ್ಲಿ ಪೊಲೀಸ್ ತಂಡವನ್ನು ಹಿಮ್ಮೆಟ್ಟಿಸಿತು. ಆಕರ್ಷಕ ಆಟವಾಡಿದ ಐಒಬಿಯ ನವೀನ್‌ರಾಜ್ `ಪಂದ್ಯದ ಆಟಗಾರ~ ಗೌರವ ಪಡೆದರು.

ವಿಶ್ವೇಶ್ವರ ಟ್ರೋಫಿಗಾಗಿ ನಡೆಯುತ್ತಿರುವ ಈ  ಟೂರ್ನಿಯಲ್ಲಿ ಐಓಬಿ, ಕೆಎಸ್‌ಪಿ ತಂಡಗಳ ಜತೆ ಎಲ್‌ಐಸಿ, ಬೆಂಗಳೂರಿನ ಬಿಎಸ್‌ಎನ್‌ಎಲ್, ಹರಿಯಾಣದ ಎಚ್‌ಎಸ್‌ಐಡಿಸಿ, ಕರ್ನಾಟಕ ಯೂತ್, ಮುಂಬೈನ ಆರ್‌ಸಿಆಫ್ ಮತ್ತು ಚೆನ್ನೈನ ಸದರ್ನ್ ರೈಲ್ವೆ ತಂಡಗಳು ಭಾಗವಹಿಸುತ್ತಿವೆ. ಎಂಟು ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.