ADVERTISEMENT

ರಾಹುಲ್‌ ದ್ರಾವಿಡ್‌ರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿ: ಅಭಿಮಾನಿಗಳಿಂದ ಆಗ್ರಹ

ಏಜೆನ್ಸೀಸ್
Published 28 ಫೆಬ್ರುವರಿ 2018, 10:17 IST
Last Updated 28 ಫೆಬ್ರುವರಿ 2018, 10:17 IST
ರಾಹುಲ್‌ ದ್ರಾವಿಡ್‌(ಸಂಗ್ರಹ ಚಿತ್ರ).
ರಾಹುಲ್‌ ದ್ರಾವಿಡ್‌(ಸಂಗ್ರಹ ಚಿತ್ರ).   

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) 2018ರ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ವಿಜೇತ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ಟ್ರೋಫಿ ಗೆದ್ದ ಬಳಿಕ ಸಂಭಾವನೆ ವಿಚಾರದಲ್ಲಿ ಸಮಾನತೆಯ ತತ್ವ ಪ್ರತಿಪಾದಿಸಿದ್ದರು.

ಭಾರತದ ಕಿರಿಯರ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ₹50 ಲಕ್ಷ ಮತ್ತು ತಂಡದ ಪ್ರತಿಯೊಬ್ಬ ಸದಸ್ಯರಿಗೂ ₹30 ಲಕ್ಷ ಬಹುಮಾನವನ್ನು ನೀಡಲಾಗುವುದು. ಸಹಾಯಕ ಸಿಬ್ಬಂದಿಗೆ ತಲಾ ₹20 ಲಕ್ಷ ನೀಡಲಾಗುವುದು ಎಂದು ಬಿಸಿಸಿಐ ಘೋಷಿಸಿತ್ತು. ಆದರೆ ಬಿಸಿಸಿಐ ವೇತನ ನೀಡುವುದರಲ್ಲಿ ತಾರತಮ್ಯ ಮಾಡಿದೆ ಎಂದು ದ್ರಾವಿಡ್‌ ಅಸಮಾಧಾನ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT