ADVERTISEMENT

ರಿಯೊ ಒಲಿಂಪಿಕ್ಸ್ ಆಯೋಜನೆ ‘ಕಠಿಣ ಸವಾಲು’: ಥಾಮಸ್ ಬಾಕ್

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2016, 19:30 IST
Last Updated 2 ಆಗಸ್ಟ್ 2016, 19:30 IST
ಸರ್ಬಿಯಾದ ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಚ್‌
ಸರ್ಬಿಯಾದ ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಚ್‌   

ರಿಯೊ ಡಿಜನೈರೊ (ಎಎಫ್‌ಪಿ):  ರಷ್ಯಾದ ಕ್ರೀಡಾಪಟುಗಳಿಂದ ಉದ್ದೀ ಪನ ಮದ್ದು ಸೇವನೆ ಪ್ರಕರಣ ಮತ್ತು ಬ್ರೆಜಿಲ್‌ನ ರಾಜಕೀಯ ಮತ್ತು ಆರ್ಥಿಕ ದುಸ್ಥಿತಿಯ ವಿವಾದಗಳಿಂದಾಗಿ ರಿಯೊ ಒಲಿಂಪಿಕ್ಸ್‌ ಆಯೋಜನೆಯು ಅತ್ಯಂತ ಸವಾಲಿನದ್ದಾಗಿದೆ ಎಂದು ಐಒಸಿ (ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ)  ಅಧ್ಯಕ್ಷ ಥಾಮಸ್ ಬಾಕ್ ಹೇಳಿದ್ದಾರೆ.

ರಷ್ಯಾದ ಕೆಲವು ಕ್ರೀಡಾಪಟುಗಳು ತಮ್ಮ ಮೇಲಿನ ನಿಷೇಧವನ್ನು ಪ್ರಶ್ನಿಸಿ ಕ್ರೀಡಾ ನ್ಯಾಯಾಲಯದ ಮೇಟ್ಟಿಲೇರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ರಷ್ಯಾದ ‘ಸರ್ಕಾರಿ ಪ್ರಾಯೋಜಿತ’ ಉದ್ದೀಪನ ಮದ್ದು ಪ್ರಕರಣದ ಕುರಿತು ಮೆಕ್‌ಲಾರೆನ್ ಅವರು ನೀಡಿರುವ ವರದಿಯು ಅತ್ಯಂತ ಗಂಭೀರವಾಗಿದೆ. ರಷ್ಯಾದ ಕ್ರೀಡಾ ಸಚಿವಾಲಯವೇ ಉದ್ದೀಪನ ಮದ್ದು ಸೇವನೆಗೆ ಪ್ರೋತ್ಸಾಹ ನೀಡಿರುವ ಗಂಭೀರ ಆರೋಪವನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದಕ್ಕೆ ಪೂರಕವಾದ ಅಂಶಗಳನ್ನೂ ವಿವರಿಸಲಾಗಿದೆ. ಇದೀಗ ಬಹುತೇಕ ಸಾಬೀತು ಕೂಡ ಆಗಿದೆ.  ಕ್ರೀಡೆಯ ಅಸ್ತಿತ್ವ ಮತ್ತು ಪಾವಿತ್ರ್ಯಕ್ಕೆ ಧಕ್ಕೆ ತರುವ ವಿಷಯ ಇದಾಗಿದೆ’ಎಂದು ಬಾಕ್ ಹೇಳಿದ್ದಾರೆ.

‘ಪ್ರಾಮಾಣಿಕ ಅಥ್ಲೀಟ್‌ಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಕೂಡ ಒಲಿಂಪಿಕ್ಸ್ ಆಂದೋಲನದ ಧ್ಯೇಯವಾಗಿದೆ’ಎಂದು  ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.