ADVERTISEMENT

ವರದಿ ನಿರಾಕರಿಸಿದ ಮಲ್ಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಫಾರ್ಮುಲಾ ಒನ್ ತಂಡ    ಫೋರ್ಸ್ ಇಂಡಿಯಾದಲ್ಲಿ ಹೊಂದಿರುವ ಪಾಲು ಬಂಡವಾಳವನ್ನು ಸಹಾರಾ ಇಂಡಿಯಾಗೆ ಮಾರಾಟ ಮಾಡಲು ಮುಂದಾಗಿಲ್ಲ ಎಂದು ವಿಜಯ್ ಮಲ್ಯ ಸ್ಪಷ್ಟಪಡಿಸಿದ್ದಾರೆ.

ಮಲ್ಯ ಅವರು ಹಾಲೆಂಡ್‌ನ ಉದ್ಯಮಿ ಮಿಶೆಲ್ ಮೋಲ್ ಜೊತೆ ಫೋರ್ಸ್ ಇಂಡಿಯಾ ತಂಡದ ಒಡೆತನ ಹೊಂದಿದ್ದಾರೆ. ತಂಡದಲ್ಲಿ ಹೊಂದಿರುವ ಪಾಲನ್ನು ಸಹಾರಾ ಇಂಡಿಯಾಕ್ಕೆ ಮಾರಾಟ ಮಾಡಲು ಮಲ್ಯ ಯೋಜನೆ ಹಾಕಿಕೊಂಡಿದ್ದಾರೆ ಎಂದ ವರದಿಯಾಗಿತ್ತು. ಇಂತಹ ವರದಿಯನ್ನು ಅವರು ನಿರಾಕರಿಸಿದ್ದಾರೆ.

`ಫೋರ್ಸ್ ಇಂಡಿಯಾ ತಂಡದಿಂದ ಹೊರಬರುವ ಪ್ರಶ್ನೆಯೇ ಇಲ್ಲ. ಭಾರತದಲ್ಲಿ ಫಾರ್ಮುಲಾ ಒನ್ ರೇಸ್ ನಡೆಯಲಿರುವ ಕಾರಣ ತಂಡದ ಪ್ರದರ್ಶನವನ್ನು ಉತ್ತಮಪಡಿಸುವುದು ನನ್ನ ಗುರಿ~ ಎಂದಿದ್ದಾರೆ. ಇಂಡಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್ ಅ. 30 ರಂದು ನಡೆಯಲಿದೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.