ADVERTISEMENT

ವಾರ್ನರ್, ಸ್ಮಿತ್ ಅರ್ಧ ಶತಕ

ಏಜೆನ್ಸೀಸ್
Published 1 ಮಾರ್ಚ್ 2018, 20:07 IST
Last Updated 1 ಮಾರ್ಚ್ 2018, 20:07 IST
ಡೇವಿಡ್ ವಾರ್ನರ್ ಚೆಂಡನ್ನು ಬಡಿದಟ್ಟಲು ಮುಂದಾದ ಕ್ಷಣ
ಡೇವಿಡ್ ವಾರ್ನರ್ ಚೆಂಡನ್ನು ಬಡಿದಟ್ಟಲು ಮುಂದಾದ ಕ್ಷಣ   

ಡರ್ಬನ್‌: ಆತಿಥೇಯ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್‌ ಅರ್ಧಶತಕ ದಾಖಲಿಸಿ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದರು.

ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಪ್ರವಾಸಿ ತಂಡ ದಿನದಾಟದ ಅಂತ್ಯಕ್ಕೆ 76 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 225 ರನ್ ಕಲೆಹಾಕಿದೆ.

ಸ್ಟೀವ್‌ ಸ್ಮಿತ್‌ ಬಳಗ 39ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು. ಈ ವೇಳೆ ವಾರ್ನರ್ (51, 79ಎ, 6ಬೌಂ) ಹಾಗೂ ನಾಯಕ ಸ್ಮಿತ್‌ (56, 114ಎ, 11ಬೌಂ) ಅರ್ಧಶತಕ ದಾಖಲಿಸಿ ತಂಡಕ್ಕೆ ಅಲ್ಪ ಆಸರೆಯಾದರು. ಶಾನ್ ಮಾರ್ಷ್‌ 96 ಎಸೆತಗಳನ್ನು ಎದುರಿಸಿ 40ರನ್ ದಾಖಲಿಸಿದರು.

ADVERTISEMENT

ಆರಂಭಿಕ ಬ್ಯಾಟ್ಸ್‌ಮನ್‌ಗಳು ದಕ್ಷಿಣ ಆಫ್ರಿಕಾದ ಬೌಲರ್ ವೆರ್ನಾನ್ ಫಿಲಾಂಡರ್‌ (36ಕ್ಕೆ2) ದಾಳಿಗೆ ವಿಕೆಟ್ ಒಪ್ಪಿಸಿದರು. ಕೇಶವ್ ಮಹಾರಾಜ (69ಕ್ಕೆ2), ಕಗಿಸೊ ರಬಾಡ (58ಕ್ಕೆ1) ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.