ADVERTISEMENT

ವಾರ್ನರ್‌ ಹೊರದಬ್ಬಲು ಒತ್ತಾಯ

ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್‌ಮನ್‌ಗೆ ಒಂದು ವರ್ಷ ನಿಷೇಧದ ಸಾಧ್ಯತೆ

ಪಿಟಿಐ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಚಿತ್ರ: ಪ್ರಕಾಶ್‌ ಶೆಟ್ಟಿ
ಚಿತ್ರ: ಪ್ರಕಾಶ್‌ ಶೆಟ್ಟಿ   

ಕೇಪ್‌ಟೌನ್‌: ಚೆಂಡು ವಿರೂಪಗೊಳಿಸಿದ ಪ್ರಕರಣದ ರೂವಾರಿಗಳಲ್ಲಿ ಒಬ್ಬರಾದ ಎಡಗೈ ಬ್ಯಾಟ್ಸ್‌ಮನ್‌ ಡೇವಿಡ್ ವಾರ್ನರ್ ಅವರನ್ನು ಹೋಟೆಲ್‌ ಕೊಠಡಿಯಿಂದ ಹೊರದಬ್ಬುವಂತೆ ಸಹ ಆಟಗಾರರೇ ಆಗ್ರಹಿಸಿದ್ದ ವಿಷಯ ಬಹಿರಂಗವಾಗಿದೆ.

ನಾಲ್ಕನೇ ಪಂದ್ಯಕ್ಕಾಗಿ ಜೊಹಾನ್ಸ್‌ಬರ್ಗ್‌ಗೆ ತೆರಳುವ ಮುನ್ನ ತಂಡದ ಆಡಳಿತಕ್ಕೆ ಮೊರೆ ಇಟ್ಟ ಆಟಗಾರರು ‘ಆತನನ್ನು ಹೊರ ಹಾಕದೇ ಇದ್ದರೆ ಹೋಟೆಲ್‌ನಲ್ಲಿ ಅನಾಹುತಗಳು ಸಂಭವಿ ಸುವ ಸಾಧ್ಯತೆ ಇದೆ’ ಎಂದು ಎಚ್ಚರಿಕೆ ನೀಡಿದ್ದರು ಎಂದು ಫಾಕ್ಸ್‌ಸ್ಪೋರ್ಟ್ಸ್‌ ಡಾಟ್ ಎಯು ವರದಿ ಮಾಡಿದೆ.

ಪ್ರಕರಣ ಬೆಳಕಿಗೆ ಬಂದು ತೀವ್ರಗೊ ಳ್ಳುತ್ತಿದ್ದಂತೆ ಸಹ ಆಟಗಾರರು ತಮ್ಮ ವಾಟ್ಸ್ ಆ್ಯಪ್ ಗುಂಪಿನಿಂದ ವಾರ್ನರ್ ಹೆಸರನ್ನು ತೆಗೆದು ಹಾಕಿದ್ದಾರೆ.

ADVERTISEMENT

ಸೋಮವಾರವಿಡೀ ವಾರ್ನರ್‌ ತಮ್ಮ ಕೊಠಡಿಯಲ್ಲಿ ಕುಡಿದು ತೂರಾ ಡಿದ್ದು ಹೋಟೆಲ್‌ನ ಬಾರ್‌ನಲ್ಲಿ ಶಾಂಪೇನ್ ಚೆಲ್ಲಿ ಗಲಾಟೆ ನಡೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮ್ಯಾಥ್ಯೂ ರೇನ್‌ಶಾಗೆ ಸ್ಥಾನ: ಮೆಲ್ಬರ್ನ್‌ (ಪಿಟಿಐ): ಡೇವಿಡ್ ವಾರ್ನರ್ ಬದಲಿಗೆ ಮ್ಯಾಥ್ಯೂ ರೇನ್‌ಶಾ ಅವರು ದಕ್ಷಿಣ ಆಫ್ರಿಕಾ ಎದುರಿನ ನಾಲ್ಕನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕ್ವೀನ್ಸ್‌ಲ್ಯಾಂಡ್‌ನ ಆಟಗಾರ ರೇನ್‌ಶಾ ಶೆಫೀಲ್ಡ್ ಶೀಲ್ಡ್‌ನ ಫೈನಲ್‌ ಪಂದ್ಯದಲ್ಲಿ ಆಡುತ್ತಿದ್ದಾಗ ಕರೆ ಬಂದಿದ್ದು ಪಂದ್ಯ ಮುಗಿದ ಕೂಡಲೇ ಜೊಹಾನ್ಸ್‌ಬರ್ಗ್‌ಗೆ ತೆರಳಿದ್ದಾರೆ.

ಆ್ಯಷಸ್ ಟೆಸ್ಟ್‌ನಲ್ಲಿ ಗಾಯದ ಸಮಸ್ಯೆ ಯಿಂದಾಗಿ ರೇನ್ ಶಾ ಆಡಲಿಲ್ಲ. ಅವರ ಬದಲಿಗೆ ಬ್ಯಾಂಕ್ರಾಫ್ಟ್ ಅವರಿಗೆ ಸ್ಥಾನ ನೀಡಲಾಗಿತ್ತು. ಗುಣಮುಖರಾದ ನಂತರ ಶೆಫೀಲ್ಡ್‌ ಟೂರ್ನಿಯಲ್ಲಿ ಅತ್ಯಮೋಘ ಆಟ ಆಡಿದ ಅವರು ಬುಲ್ಸ್ ತಂಡ ಫೈನಲ್‌ಗೆ ಪ್ರವೇಶಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಡಗೈ ಬ್ಯಾಟ್ಸ್‌ಮನ್ ಆಗಿರುವ ರೇನ್‌ಶಾ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯದಾಗಿ ಟೆಸ್ಟ್ ಪಂದ್ಯ ಆಡಿದ್ದರು.

ವಾರ್ನರ್‌ ಇಲ್ಲದಿದ್ದರೆ ನಷ್ಟ ಇಲ್ಲ: ವಾರ್ನರ್ ಅವರನ್ನು ತಂಡದಿಂದ ಕೈಬಿಟ್ಟರೆ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಣಕ್ಕೆ ಇಳಿಯಲು ಸಾಕಷ್ಟು ಬದಲಿ ಆಟಗಾರರು ಇದ್ದಾರೆ ಎಂದು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಹೇಳಿದ್ದಾರೆ. ಚೆಂಡು ವಿರೂಪಗೊಳಿಸಿದ ಪ್ರಕರಣ ದಲ್ಲಿ ವಾರ್ನರ್ ವಿರುದ್ಧ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಣಯ ಕೈಗೊಂಡ ನಂತರ ಸನ್‌ರೈಸರ್ಸ್‌ನಲ್ಲಿ ಅವರು ಇರಬೇಕೇ ಬೇಡವೇ ಎಂಬುದರ ಬಗ್ಗೆ ನಿರ್ಧರಿಸಲಾಗುವುದು ಎಂದು ತಂಡದ ಸಲಹೆಗಾರ ವಿವಿಎಸ್‌ ಲಕ್ಷ್ಮಣ್ ಸೋಮವಾರ ಹೇಳಿದ್ದರು.

ಚೆಂಡು ವಿರೂಪ ಪ್ರಕರಣವನ್ನು ಕ್ರಿಕೆಟ್ ಆಸ್ಟ್ರೇಲಿಯಾ ತನಿಖೆಗೆ ಒಳಪಡಿಸಿದ್ದು ಮೂಲಗಳ ಪ್ರಕಾರ ವಾರ್ನರ್‌ ಅವರಿಗೆ ಒಂದು ವರ್ಷ ನಿಷೇಧ ಹೇರುವ ಸಾಧ್ಯತೆ ಇದೆ.

ಆ್ಯಷಸ್‌ನಲ್ಲೂ ಚೆಂಡು ವಿರೂಪ: ವಾಗನ್‌ 
ಲಂಡನ್‌ (ಎಎಫ್‌ಪಿ): ಈ ಬಾರಿಯ ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಚೆಂಡು ವಿರೂಪಗೊಳಿಸಿರುವ ಸಾಧ್ಯತೆ ಇದೆ ಎಂದು ಇಂಗ್ಲೆಂಡ್‌ನ ಹಿರಿಯ ಆಟಗಾರ ಮೈಕೆಲ್ ವಾಗನ್ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಕ್ಯಾಮರಾನ್ ಬ್ಯಾಂಕ್ರಾಫ್ಟ್‌ ಚೆಂಡು ವಿರೂಪಗೊಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸ್ಟೀವ್ ಸ್ಮಿತ್ ತಮ್ಮ ನಾಯಕತ್ವದಲ್ಲಿ ಇಂಥ ಪ್ರಕರಣ ಇದೇ ಮೊದಲ ಬಾರಿ ನಡೆದಿದೆ ಎಂದಿದ್ದರು. ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ವಾಗನ್‌ ‘ಸ್ಮಿತ್ ಹೇಳಿಕೆಯನ್ನು ನಂಬಲಾಗದು. ಈ ಹಿಂದೆಯೂ ಚೆಂಡು ವಿರೂಪಗೊಳಿಸಿರುವ ಸಾಧ್ಯತೆ ಇದೆ’ ಎಂದಿದ್ದಾರೆ.

ಕೆಣಕುವುದನ್ನು ಬಿಡಿ: ಮಾಲ್ಕಂ
ಸಿಡ್ನಿ (ಎಎಫ್‌ಪಿ):
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಪಂದ್ಯಗಳ ಸಂದರ್ಭದಲ್ಲಿ ಎದುರಾಳಿ ತಂಡದವನ್ನು ಕೆಣಕುವುದನ್ನು ಇನ್ನಾದರೂ ಬಿಡಬೇಕು ಎಂದು ಪ್ರಧಾನಿ ಮಾಲ್ಕಂ ಟರ್ನ್‌ಬುಲ್‌ ಕಿವಿಮಾತು ಹೇಳಿದ್ದಾರೆ.

ಕೇಪ್‌ಟೌನ್‌ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣ ದಿಗ್ಭ್ರಮೆ ಮೂಡಿಸಿದೆ ಎಂದು ಬಣ್ಣಿಸಿರುವ ಅವರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕ್ರಿಕೆಟ್ ಆಸ್ಟ್ರೇಲಿಯಾಗೆ ಸೂಚನೆ ನೀಡಿದ್ದಾರೆ.

ಎದುರಾಳಿಗಳನ್ನು ಕೆಣಕುವುದಕ್ಕೆ ಸಂಬಂಧಿಸಿಯೂ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಈ ಮೂಲಕ ಕ್ರಿಕೆಟ್ ಜಗತ್ತಿಗೆ ನಾವು ಮಾದರಿಯಾಗಬೇಕು ಎಂದು ಅವರು ಹೇಳಿದ್ದಾರೆ.

ಕೆಣಕುವುದನ್ನು ಬಿಡಿ: ಮಾಲ್ಕಂ ಸಲಹೆ
ಸಿಡ್ನಿ (ಎಎಫ್‌ಪಿ): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಪಂದ್ಯಗಳ ಸಂದರ್ಭದಲ್ಲಿ ಎದುರಾಳಿ ತಂಡದವನ್ನು ಕೆಣಕುವುದನ್ನು ಇನ್ನಾದರೂ ಬಿಡಬೇಕು ಎಂದು ಪ್ರಧಾನಿ ಮಾಲ್ಕಂ ಟರ್ನ್‌ಬುಲ್‌ ಕಿವಿಮಾತು ಹೇಳಿದ್ದಾರೆ.

ಚೆಂಡು ವಿರೂಪಗೊಳಿಸಿದ ಪ್ರಕರಣ ದಿಗ್ಭ್ರಮೆ ಮೂಡಿಸಿದೆ ಎಂದು ಬಣ್ಣಿಸಿ ರುವ ಅವರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕ್ರಿಕೆಟ್ ಆಸ್ಟ್ರೇಲಿಯಾಗೆ ಸೂಚನೆ ನೀಡಿದ್ದಾರೆ. ಎದುರಾಳಿಗಳನ್ನು ಕೆಣಕುವುದಕ್ಕೆ ಸಂಬಂಧಿಸಿಯೂ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಈ ಮೂಲಕ ಕ್ರಿಕೆಟ್ ಜಗತ್ತಿಗೆ ನಾವು ಮಾದರಿಯಾಗಬೇಕು ಎಂದು ಅವರು ಹೇಳಿದ್ದಾರೆ.

ಲೆಹ್ಮನ್‌ ವಜಾ ಸಾಧ್ಯತೆ
ಜೊಹಾನ್ಸ್‌ಬರ್ಗ್‌ (ಎಎಫ್‌ಪಿ):
ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ಆಸ್ಟ್ರೇಲಿಯಾ ತಂಡದ ಕೋಚ್ ಡರೆನ್‌ ಲೆಹ್ಮನ್ ಮತ್ತು ಸ್ಟೀವ್ ಸ್ಮಿತ್‌ ಅವರನ್ನು ವಜಾ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಂಡದ ಕೃತ್ಯಕ್ಕೆ ಮಾಧ್ಯಮ ಗಳಿಂದ ತೀವ್ರ ಟೀಕೆಗೆ ಒಳಗಾಗಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಜೇಮ್ಸ್ ಸುದರ್ಲೆಂಡ್‌ ಈ ನಿರ್ಧಾರಕ್ಕೆ ಬಂದಿದ್ದು ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪ್ರಕರಣದ ತನಿಖೆಗೆ ಬಂದಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಇಂಟೆಗ್ರಿಟಿ ವಿಭಾಗದ ಮುಖ್ಯಸ್ಥ ಇಯಾನ್ ರಾಯ್ ಅವರೊಂದಿಗೆ ಸುದರ್ಲೆಂಡ್ ಮಂಗಳವಾರ ಚರ್ಚೆ ನಡೆಸಿದ್ದು ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

*
ಹೇಗಾದರೂ ಮಾಡಿ ಪಂದ್ಯ ಗೆಲ್ಲುವ ಆಸ್ಟ್ರೇಲಿಯಾದ ಚಾಳಿಯ ಹಿಂದೆ ಚೆಂಡು ವಿರೂಪಗೊಳಿಸುವ ಶಕ್ತಿ ಇದೆ ಎಂಬುದು ಈಗ ಸಾಬೀತಾಗಿದೆ.
-ಒಟಿಸ್ ಗಿಬ್ಸನ್‌, ದಕ್ಷಿಣ ಆಫ್ರಿಕಾ ತಂಡದ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.