ADVERTISEMENT

ವಿದಾಯ ಹೇಳುವಂತೆ ಹಸ್ಸಿಗೆ ಸೂಚನೆ : ವರದಿ ನಿರಾಕರಿಸಿದ ಗ್ರೆಗ್ ಚಾಪೆಲ್

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 18:35 IST
Last Updated 21 ಫೆಬ್ರುವರಿ 2011, 18:35 IST

ಸಿಡ್ನಿ (ಐಎಎನ್‌ಎಸ್): ಗಾಯದ ಕಾರಣ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿರುವ ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್‌ಮನ್ ಮೈಕ್ ಹಸ್ಸಿ ಈಗ ಸುದ್ದಿಯಲ್ಲಿದ್ದಾರೆ.

ಹಸ್ಸಿ ವಿಶ್ವಕಪ್ ಟೂರ್ನಿಯ ವೇಳೆಗೆ ದೈಹಿಕ ಸಾಮರ್ಥ್ಯ ಪಡೆಯುವುದು ಅನುಮಾನ ಎಂಬ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಅವರನ್ನು ಕೈಬಿಟ್ಟಿತ್ತು. ಆದರೆ ಆಯ್ಕೆ ಸಮಿತಿಯ ನಿರ್ಧಾರದ ಬಗ್ಗೆ ಹಸ್ಸಿ ಅತೃಪ್ತಿ ವ್ಯಕ್ತಪಡಿಸಿದ್ದರು.

ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಎರಡನೇ ಲೀಗ್ ಪಂದ್ಯದ ವೇಳೆಗೆ ನಾನು ಸಂಪೂರ್ಣ ದೈಹಿಕ ಸಾಮರ್ಥ್ಯ ಪಡೆಯುತ್ತಿದ್ದೆ ಎಂದು ಹಸ್ಸಿ ನುಡಿದಿದ್ದಾರೆ. ಮಾತ್ರವಲ್ಲ ತನ್ನ ದೈಹಿಕ ಸಾಮರ್ಥ್ಯವನ್ನು ತೋರಿಸಿ ಸಿಎಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಉದ್ದೇಶದಿಂದ ಅವರು ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಆಡಲು ಮುಂದಾಗಿದ್ದಾರೆ.

ಇದೇ ವೇಳೆ ಕ್ರಿಕೆಟ್‌ಗೆ ವಿದಾಯ ಹೇಳುವಂತೆ ಹಸ್ಸಿ ಅವರಿಗೆ ಮಾಜಿ ಆಟಗಾರ ಗ್ರೆಗ್ ಚಾಪೆಲ್ ಸಲಹೆ ನೀಡಿದ್ದಾರೆಎಂದು ವರದಿಯಾಗಿದೆ. ಆದರೆ ಚಾಪೆಲ್ ಇದನ್ನು ಅಲ್ಲಗಳೆದಿದ್ದಾರೆ.

ಹಸ್ಸಿ ಅವರು ಭಾನುವಾರ ನಡೆದ ಪಂದ್ಯದಲ್ಲಿ ಪಶ್ಚಿಮ ಆಸ್ಟ್ರೇಲಿಯಾ ಪರ ಆಡಲು ಸಜ್ಜಾಗಿದ್ದಾರೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳು ಅವರನ್ನು ಆಡದಂತೆ ತಡೆದಿದ್ದಾರೆ ಎಂದು ‘ಡೇಲಿ ಟೆಲೆಗ್ರಾಫ್’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.