ಲಾಸ್ ಏಂಜಲೀಸ್ (ಪಿಟಿಐ): ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಕುಸ್ತಿಪಟು ಅಮಿತ್ ಕುಮಾರ್ ನಿಗದಿತ ಐದು ಸುತ್ತುಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದ ಪರಿಣಾಮ ಭಾರತ ಇಲ್ಲಿ ಕೊನೆಗೊಂಡ ಫಿಲಾ ವಿಶ್ವಕಪ್ ಪುರುಷರ ಪ್ರೀಸ್ಟೈಲ್ ಕುಸ್ತಿ ಟೂರ್ನಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ.
ಐದನೇ ಸ್ಥಾನಕ್ಕಾಗಿ ನಡೆದ ಸ್ಪರ್ಧೆ ಯಲ್ಲಿ ಭಾರತ 3–5ರಲ್ಲಿ ಮಂಗೋಲಿ ಯಾದ ಎದುರು ಸೋಲು ಕಂಡಿತು.
ಈ ಸ್ಪರ್ಧೆಯ 57 ಕೆಜಿ ವಿಭಾಗ ದಲ್ಲಿ ಅಮಿತ್, ಮಂಗೋಲಿ ಯಾದ ನೋಮಿ ಬಟ್‌ಬೋಲ್ಡ್ ಅವರನ್ನು ಮಣಿಸಿ ಭಾರತಕ್ಕೆ ಮುನ್ನಡೆ ತಂದು ಕೊಟ್ಟರು. ಆದರೆ ಬಜರಂಗ್ (62ಕೆಜಿ) ಮತ್ತು ರಜನೀಶ್ (65ಕೆಜಿ) ವಿಭಾಗಗಳಲ್ಲಿ ನಿರಾಸೆ ಕಂಡಿದ್ದರಿಂದ ಭಾರತ ಹಿನ್ನಡೆ ಅನುಭವಿಸು ವಂತಾ ಯಿತು.
ಆದರೆ 70 ಕೆಜಿ ವಿಭಾಗದಲ್ಲಿ ಅಮಿತ್ ಕುಮಾರ್ ದಾನ್‌ಕರ್ ಹಾಗೂ 74 ಕೆಜಿ ವಿಭಾಗದಲ್ಲಿ ಪ್ರವೀಣ್ ರಾಣಾ ಅಮೋಘ ಪ್ರದರ್ಶನದ ಮೂಲಕ ಜಯ ಪಡೆದು ಭಾರತದ ಪಾಳಯದಲ್ಲಿ ಜಯದ ಭರವಸೆ ಮೂಡಿಸಿದ್ದರು.
86 ಕೆಜಿ ವಿಭಾಗದಲ್ಲಿ ಪವನ್ ಕುಮಾರ್ ಹಾಗೂ ಸತ್ಯವರ್ತ್ ಕಡಿಯಾನ್ ಸೋಲು ಅನುಭವಿಸಿದ ಕಾರಣ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಸ್ಪರ್ಧಿಸಿದ್ದ ಭಾರತ ಆರನೇ ಸ್ಥಾನ ಗಳಿಸುವಂತಾಯಿತು.
ಇದಕ್ಕೆ ಮೊದಲು ನಡೆದ ಸ್ಪರ್ಧೆ ಯಲ್ಲಿ ಭಾರತ 5–3ರಲ್ಲಿ ಟರ್ಕಿ ವಿರುದ್ಧ ಹಾಗೂ ಅರ್ಮೇನಿಯಾದ ಎದುರು 4–4ರಲ್ಲಿ ತಾಳೆಯ ಆಧಾರ ದಲ್ಲಿ ಜಯ ಗಳಿಸಿದರೆ, 2–6ರಲ್ಲಿ ಅಮೆರಿಕ ಹಾಗೂ 0–8ರಲ್ಲಿ ಇರಾನ್ ಎದುರು ಸೋಲು ಕಂಡು ‘ಎ’ ಗುಂಪಿ ನಲ್ಲಿ ಮೂರನೇ ಸ್ಥಾನ ಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.