ADVERTISEMENT

ವಿಶ್ವಕಪ್‌ ಬಳಿಕ ನಿವೃತ್ತಿ ನಿರ್ಧಾರ: ಯುವರಾಜ್‌

ಪಿಟಿಐ
Published 28 ಫೆಬ್ರುವರಿ 2018, 21:20 IST
Last Updated 28 ಫೆಬ್ರುವರಿ 2018, 21:20 IST
ವಿಶ್ವಕಪ್‌ ಬಳಿಕ ನಿವೃತ್ತಿ ನಿರ್ಧಾರ: ಯುವರಾಜ್‌
ವಿಶ್ವಕಪ್‌ ಬಳಿಕ ನಿವೃತ್ತಿ ನಿರ್ಧಾರ: ಯುವರಾಜ್‌   

ಮೊನಾಕೊ: ಭಾರತದ ಆಲ್‌ರೌಂಡ್ ಆಟಗಾರ ಯುವರಾಜ್ ಸಿಂಗ್‌ 2019ರ ವಿಶ್ವಕಪ್‌ ಟೂರ್ನಿಯ ಬಳಿಕ ನಿವೃತ್ತಿಯ ಬಗ್ಗೆ ಯೋಚಿಸುವುದಾಗಿ ಹೇಳಿದ್ದಾರೆ.

2017ರ ಜೂನ್‌ ತಿಂಗಳಿನಲ್ಲಿ ಭಾರತ ತಂಡದ ಪರ ಅವರು ಆಡಿದ್ದರು. ಆ ನಂತರ ಯುವರಾಜ್‌ಗೆ ಅವಕಾಶ ಸಿಕ್ಕಿಲ್ಲ. ‘ಈ ಬಾರಿಯ ಐಪಿಎಲ್‌ನಲ್ಲಿ ಮಿಂಚುವ ವಿಶ್ವಾಸದಲ್ಲಿದ್ದೇನೆ. ಇದರಿಂದ 2019ರ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗುವ ನಿರೀಕ್ಷೆ ಇದೆ’ ಎಂದು ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಯುವರಾಜ್ ಹೇಳಿದ್ದಾರೆ.

2011ರ ವಿಶ್ವಕಪ್‌ವರೆಗೂ ಯುವರಾಜ್ ಭಾರತ ತಂಡದಲ್ಲಿ ನಿರಂತ ರವಾಗಿ ಆಡಿದ್ದರು. ಕ್ಯಾನ್ಸರ್‌ನಿಂದ ಬಳಲಿದ ಬಳಿಕ ಅವರು ಫಾರ್ಮ್‌ ಕಳೆದುಕೊಂಡರು.

ADVERTISEMENT

‘ವೃತ್ತಿಜೀವನದ ಆರಂಭದಲ್ಲಿ 6 ರಿಂದ 7 ವರ್ಷ ಉತ್ತಮವಾಗಿ ಆಡಿದ್ದೇನೆ. ಬಳಿಕ ಯುವ ಆಟಗಾರರು ಮಿಂಚಲು ಆರಂಭಿಸಿದರು. ಇದರಿಂದ ಅವಕಾಶಗಳು ಕಡಿಮೆಯಾದವು. ಅದೇ ಸಂದರ್ಭದಲ್ಲಿ ಕ್ಯಾನ್ಸರ್ ನನ್ನನ್ನು ಕಾಡಿತು. ಚೇತರಿಸಿಕೊಂಡ ಬಳಿಕ ನಿರಂತವಾಗಿ ಅವಕಾಶ ಸಿಗಲಿಲ್ಲ. ಕೆಲವು ಪಂದ್ಯಗಳಲ್ಲಿ ಮಾತ್ರ ಆಡಲು ಸಾಧ್ಯವಾಯಿತು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.