ADVERTISEMENT

ವಿಶ್ವ ಅಥ್ಲೆಟಿಕ್ಸ್: ಮತ್ತೊಂದು ಪದಕದತ್ತ ಫ್ರೇಸರ್ ಚಿತ್ತ

ಓಟದ ಸ್ಪರ್ಧೆಯಲ್ಲಿ ಜಮೈಕಾದ ಪ್ರಾಬಲ್ಯ

ಕೆ.ರಾಜೀವ
Published 15 ಆಗಸ್ಟ್ 2013, 20:59 IST
Last Updated 15 ಆಗಸ್ಟ್ 2013, 20:59 IST

ಮಾಸ್ಕೊ: ಜಮೈಕಾದ ಅಥ್ಲೀಟ್‌ಗಳ ಪ್ರಾಬಲ್ಯ ಮುಂದುವರಿದಿದೆ. 14ನೇ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದ 200ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಶೆಲ್ಲಿ ಆ್ಯನ್ ಫ್ರೇಸರ್ ಫ್ರೈಸ್ ಫೈನಲ್ ಪ್ರವೇಶಿಸಿದ್ದು, ಮತ್ತೊಂದು ಪದಕದ ಮೇಲೆ ಕಣ್ಣು ಇಟ್ಟಿದ್ದಾರೆ.

ಲುಜ್ನಿಕಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ 200ಮೀ ಸೆಮಿಫೈನಲ್ ಪೈಪೋಟಿಯಲ್ಲಿ 22.54ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ, ಪ್ರಬಲ ಎದುರಾಳಿ ಎನಿಸಿರುವ ಅಮೆರಿಕದ ಅಲೆಯಸನ್ ಮೈಕೆಲ್ಲಾ ಫಿಲೆಕ್ಸ್ ಅವರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಫಿಲೆಕ್ಸ್  ಹೀಟ್ಸ್‌ನಲ್ಲಿ 22.59ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು.

ಬೀಜಿಂಗ್ ಮತ್ತು ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಸಾಧನೆ ಮಾಡಿರುವ ಜಮೈಕಾದ ಅಥ್ಲೀಟ್ ವಿಶ್ವಾಸ ಈಗ ಹೆಚ್ಚಾಗಿದೆ. 28 ವರ್ಷದ ಪ್ರೈಸ್ ಇದೇ ಕ್ರೀಡಾಂಗಣದಲ್ಲಿ ಸೋಮವಾರ 100ಮೀ. ಓಟವನ್ನು 10.71 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಬಂಗಾರದ ಸಾಮರ್ಥ್ಯ ತೋರಿದ್ದರು.

ಫಿಲೆಕ್ಸ್ ಸೆಮಿಫೈನಲ್‌ನಲ್ಲಿ 22.30ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಫೈನಲ್ ಪ್ರವೇಶಿಸಿದ್ದಾರೆ. ಉಕ್ರೇನ್‌ನ ರ‌್ಯಾಮಿಯನ್ (ಕಾಲ: 22.70ಸೆ.), ಅಮೆರಿಕದ ಚರೊಂಡಾ ವಿಲಿಯಮ್ಸ (ಕಾಲ: 22.80ಸೆ.) ಗುರಿ ತಲುಪಿದರು. ಶುಕ್ರವಾರ ಫೈನಲ್ ನಡೆಯಲಿದೆ.

ಶುಕ್ರವಾರ ಪುರುಷರ 4x400 ರಿಲೇ ಸ್ಪರ್ಧೆ ನಡೆಯಲಿದೆ. ಲಾಂಗ್‌ಜಂಪ್ ಸ್ಪರ್ಧೆ ಕೂಡ ಜರುಗಲಿದೆ.

ಶುಕ್ರವಾರದ ಸ್ಪರ್ಧೆ...
ಪುರುಷರ ವಿಭಾಗ

* ಲಾಂಗ್ ಜಂಪ್
* ಷಾಟ್ ಪಟ್
* 5,000ಮೀಟರ್ಸ್‌
* 4x400 ರಿಲೇ

ಮಹಿಳಾ ವಿಭಾಗ
* 200ಮೀಟರ್‍ಸ್
* ಹ್ಯಾಮರ್ ಎಸೆತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT