ADVERTISEMENT

ವಿಶ್ವ ಹಾಕಿ ಸರಣಿಗೆ ಅರ್ಜೆಂಟೀನಾ ಆಟಗಾರರು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಮುಂಬೈ (ಪಿಟಿಐ): ಅರ್ಜೆಂಟೀನಾದ ಆರು ಹಾಗೂ ಸ್ಪೇನ್‌ನ ಮೂವರು ಆಟಗಾರರು ವಿಶ್ವ ಹಾಕಿ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಚೊಚ್ಚಲ ವಿಶ್ವ ಹಾಕಿ ಸರಣಿ ಡಿಸೆಂಬರ್ 15 ರಿಂದ ಜನವರಿ 22ರ ವರೆಗೆ ನಡೆಯಲಿದೆ.

ಅರ್ಜೆಂಟೀನಾದ ಲೂಕಾಸ್ ವಿಲಾ, ಮಟಿಯಸ್ ವಿಲಾ, ರಾಡ್ರಿಗೊ, ಕಾಲಿನಿ ಫಕುಡೊ, ಪೆಡ್ರೊ ಇಬಾರಾ ಮತ್ತು ಜುವಾನ್ ಮಾರ್ಟಿನ್ ಲೊಪೆಜ್ ಈ ಸರಣಿಯಲ್ಲಿ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.