ADVERTISEMENT

ವೇಗಿಗಳ ದಾಳಿಗೆ ನಲುಗಿದ ಹರಿಣಗಳು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 10:00 IST
Last Updated 20 ಡಿಸೆಂಬರ್ 2013, 10:00 IST

ಜೊಹಾನ್ಸ್‌ಬರ್ಗ್ : ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತದ ವೇಗಿಗಳ ಕರಾರುವಕ್ಕಾದ ದಾಳಿಗೆ ದಕ್ಷಿಣ ಆಫ್ರಿಕಾ ತಂಡ ತೀವ್ರ ಆಘಾತ ಅನುಭವಿಸಿದೆ. ಅತಿಥೇಯರು ಮೊದಲ ಇನ್ನಿಂಗ್ಸ್‌ನಲ್ಲಿ 230 ರನ್‌ಗಳಿಗೆ ಆಲೌಟ್‌ ಆಗಿದ್ದು, 36 ರನ್‌ಗಳ ಹಿನ್ನಡೆಯಾಗಿದೆ.

ಎರಡನೇ ದಿನದಾಟದಂತ್ಯಕ್ಕೆ 213ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ದ. ಆಫ್ರಿಕಾ ತಂಡ, ಶುಕ್ರವಾರ 17 ರನ್ ಸೇರಿಸುವಷ್ಟರಲ್ಲಿ ಉಳಿದ 4 ವಿಕೆಟ್‌ಗಳನ್ನು ಒಪ್ಪಿಸಿತು.

ಮೂರನೇ ದಿನವಾದ ಇಂದು ಉತ್ತಮ ದಾಳಿ ನಡೆಸಿದ ಅನುಭವಿ ವೇಗಿ ಜಹೀರ್ ಖಾನ್ ಮೂರು ವಿಕೆಟ್ ಪಡೆದು ಹರಿಣಗಳ ಹಿನ್ನಡೆಗೆ ಪ್ರಮುಖ ಪಾತ್ರ ವಹಿಸಿದರು. ಗುರುವಾರ ಮೂರು ವಿಕೆಟ್ ಪಡೆದಿದ್ದ ಇಶಾಂತ್ ಶರ್ಮಾ ಇಂದು ಒಂದು ವಿಕೆಟನ್ನು ಪಡೆದರು.

ADVERTISEMENT

ಭಾರತ ತಂಡವು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು ವಿಕೆಟ್ ನಷ್ಟವಿಲ್ಲದೆ 14 ರನ್ ಕಲೆಹಾಕಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ http://www.prajavani.net/cricket

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.