ADVERTISEMENT

ಶರ‍ಪೋವಾಗೆ ಪ್ರಶಸ್ತಿ

ಉದ್ದೀಪನ ಮದ್ದು ಸೇವನೆ: ಶಿಕ್ಷೆಯಿಂದ ಮುಕ್ತವಾದ ನಂತರ‌ದ ಮೊದಲ ಡಬ್ಲ್ಯುಟಿಎ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST
ಶರ‍ಪೋವಾಗೆ ಪ್ರಶಸ್ತಿ
ಶರ‍ಪೋವಾಗೆ ಪ್ರಶಸ್ತಿ   

ತಿಯಾಂಜಿನ್‌, ಚೀನಾ (ರಾಯಿಟರ್ಸ್‌): ಮರಿಯಾ ಶರಪೋವಾ ಎರಡು ವರ್ಷಗಳ ನಂತರ ಭಾನುವಾರ ಮೊದಲ ಡಬ್ಲ್ಯುಟಿಎ ಪ್ರಶಸ್ತಿ ಎತ್ತಿ ಹಿಡಿದರು.

ಇಲ್ಲಿ ನಡೆದ ತಿಯಾಂಜಿನ್ ಓಪನ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಅವರು ಬೆಲಾರಸ್‌ನ ಆರ್ಯಾ ಸಬಲೆಂಕಾ ಅವರನ್ನು 7–5, 7–6 (8)ರಿಂದ ಮಣಿಸಿದರು. ಉದ್ದೀಪನ ಮದ್ದು ಸೇವನೆ ಆರೋಪದಲ್ಲಿ ನಿಷೇಧಕ್ಕೆ ಗುರಿಯಾಗಿದ್ದರು.

ಅನುಭವಿ ಮರಿಯಾ ಅವರು ಯುವ ಆಟಗಾರ್ತಿ ಆರ್ಯಾ ಮೇಲೆ ಆರಂಭದಲ್ಲಿ ಮುನ್ನಡೆ ಪಡೆದಿದ್ದು. ನಂತರ ಕೊಂಚ ಹಿನ್ನಡೆ ಅನುಭವಿಸಿದರು.

ADVERTISEMENT

ಆದರೆ ಮರುಹೋರಾಟ ನಡೆಸಿ ಪ್ರಶಸ್ತಿ ಗೆದ್ದರು. ಮೊದಲ ಸೆಟ್‌ನ ಒಂದು ಹಂತದಲ್ಲಿ 4–2ರಿಂದ ಮುಂದಿದ್ದಾಗ ಲಭಿಸಿದ ಅವಕಾಶದಲ್ಲಿ ಪ್ರಬಲ ಸರ್ವ್ ಮಾಡಿದ ರಷ್ಯಾ ಆಟಗಾರ್ತಿ ಎದುರಾಳಿಯನ್ನು ದಂಗುಬಡಿಸಿದರು. ಆದರೂ ಆರ್ಯಾ ಸುಲಭವಾಗಿ ಮಣಿಯಯಲಿಲ್ಲ. ಹೀಗಾಗಿ ಕೊನೆಯ ಗೇಮ್‌ನಲ್ಲಿ ರೋಚಕ ಹೋರಾಟ ಕಂಡುಬಂತು.

ಫೆಡರರ್‌ಗೆ ಪ್ರಶಸ್ತಿ: ಶಾಂಘೈ (ಎಎಫ್‌ಪಿ): ಬಲಿಷ್ಠ ಎದುರಾಳಿ ರಫೆಲ್‌ ನಡಾಲ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ರೋಜರ್ ಫೆಡರರ್‌ ಶಾಂಘೈ ಓಪನ್‌ ಟೆನಿಸ್ ಟೂರ್ನಿಯ ಪ್ರಶಸ್ತಿ ತಮ್ಮದಾಗಿಸಿ
ಕೊಂಡರು.

ವಿಶ್ವದ ಇಬ್ಬರು ಬಲಿಷ್ಠ ಆಟಗಾರರ ನಡುವಿನ ಪಂದ್ಯ ಕುತೂಹಲ ಕೆರಳಿಸಿತ್ತು. ಆರಂಭದಿಂದಲೇ ಪಾರಮ್ಯ ಮೆರೆದ ಫೆಡರರ್‌ 6–4, 6–3ರಿಂದ ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.