ADVERTISEMENT

ಸಚಿನ್ ತೆಂಡೂಲ್ಕರ್ ಬೆಂಬಲಕ್ಕೆ ರಾಹುಲ್ ದ್ರಾವಿಡ್, ಲಸಿತ್ ಮಾಲಿಂಗ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಮುಂಬೈ (ಪಿಟಿಐ): ಎರಡೂ ತಂಡಗಳಿಗೆ ತಲಾ 25 ಓವರ್‌ಗಳಂತೆ ನಾಲ್ಕು ಇನಿಂಗ್ಸ್‌ಗಳನ್ನು ಆಡಿಸುವುದು ಸೇರಿದಂತೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಹಲವು ಬದಲಾವಣೆ ಮಾಡುವ ಸಚಿನ್ ತೆಂಡೂಲ್ಕರ್ ಅವರ ಸಲಹೆಗೆ ರಾಹುಲ್ ದ್ರಾವಿಡ್ ಹಾಗೂ ಲಸಿತ್ ಮಾಲಿಂಗ ಧ್ವನಿಗೂಡಿಸಿದ್ದಾರೆ.

`ಇದೊಂದು ಆಸಕ್ತಿದಾಯಕ ಸಲಹೆ. ಈ ಸಲಹೆಯನ್ನು ಏಕೆ ಐಸಿಸಿ ತಿರಸ್ಕರಿಸಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಇದೊಂದು ಒಳ್ಳೆಯ ಯೋಜನೆ. ಇದೊಂದೊ ಹೊಸ ಪ್ರಯೋಗ ಆಗುತಿತ್ತು~ ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ದ್ರಾವಿಡ್ ನುಡಿದಿದ್ದಾರೆ.

`ಈಗಾಗಲೇ ಆಸ್ಟ್ರೇಲಿಯಾದ ದೇಶಿ ಕ್ರಿಕೆಟ್‌ನಲ್ಲಿ ಈ ಪ್ರಯೋಗ ನಡೆದಿದೆ. ಅದರ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳತ್ತ ಕಣ್ಣು ಹರಿಸಬೇಕಿತ್ತು~ ಎಂದಿದ್ದಾರೆ.

ಏಕದಿನ ಕ್ರಿಕೆಟ್ ಸ್ವರೂಪದಲ್ಲಿ ಬದಲಾವಣೆ ಸಂಬಂಧ ಸಚಿನ್ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರೂನ್ ಲಾರ್ಗಟ್‌ಗೆ ಪತ್ರ ಬರೆದ್ದ್ದಿದರು. ಆದರೆ ಐಸಿಸಿ ಅದನ್ನು ತಿರಸ್ಕರಿಸಿದೆ. 

 `ಸಚಿನ್ ನೀಡಿರುವ ಸಲಹೆಗೆ ನನ್ನ ಬೆಂಬಲವಿದೆ. ಅವರ ಹೊಸ ಸಲಹೆ ಬೌಲರ್‌ಗಳಿಗೂ ನೆರವು ನೀಡಲಿದೆ. ಈಗಿರುವ 50 ಓವರ್ ಮಾದರಿ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಅನುಕೂಲ ಮಾಡಿಕೊಡುವಂತಿದೆ~ ಎಂದು ಶ್ರೀಲಂಕಾ ತಂಡದ ವೇಗಿ ಮಾಲಿಂಗ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.