ADVERTISEMENT

ಸಚಿನ್ ನಲ್ವತ್ತು ಓವರ್‌ವರೆಗೆ ಕ್ರೀಸ್‌ನಲ್ಲಿರಬೇಕು: ಅಕ್ರಮ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 17:30 IST
Last Updated 18 ಫೆಬ್ರುವರಿ 2011, 17:30 IST

ನವದೆಹಲಿ (ಪಿಟಿಐ): ಭಾರತವು ವಿಶ್ವಕಪ್ ಚಾಂಪಿಯನ್ ಆಗುವ ಸಾಧ್ಯತೆ ಹೆಚ್ಚಿದ್ದು, ಸಚಿನ್ ತೆಂಡೂಲ್ಕರ್ ಅವರೇ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸೀಮ್ ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಯೊಂದು ಪಂದ್ಯದಲ್ಲಿ ತೆಂಡೂ ಲ್ಕರ್ ಅವರು ನಲ್ವತ್ತು ಓವರುಗಳ ವರೆಗೆ ಕ್ರೀಸ್‌ಗೆ ಲಂಗರು ಹಾಕಿ ನಿಲ್ಲಲು ಪ್ರಯತ್ನ ಮಾಡಬೇಕು.

ಆಗಲೇ ತಂಡದ ಖಾತಿಯಲ್ಲಿ ರನ್ ಮೊತ್ತ ಹೆಚ್ಚಲು ಸಾಧ್ಯ. ಸಚಿನ್ ಇದ್ದರೆ ತಂಡದ ಮೇಲಿನ ಒತ್ತಡವೂ ಬಹಳಷ್ಟು ಕಡಿಮೆ ಆಗು ತ್ತದೆ ಎಂದು ಅಕ್ರಮ್ ತಿಳಿಸಿದ್ದಾರೆ.
‘ಮಾಸ್ಟರ್ ಬ್ಲಾಸ್ಟರ್’ ಚೆನ್ನಾಗಿ ಆಡಿದರೆ ಭಾರತ ತಂಡವು ಪ್ರತಿ ಯೊಂದು ಪಂದ್ಯದಲ್ಲಿ 300ಕ್ಕೂ ಹೆಚ್ಚು ರನ್ ಮೊತ್ತವನ್ನು ಗಳಿಸುವುದು ಸಾಧ್ಯ ವಾಗುತ್ತದೆಂದು ಅವರು ಹೇಳಿದ್ದಾರೆ.

‘ತೆಂಡೂಲ್ಕರ್ ಒಂದು ಕೊನೆಯಲ್ಲಿ ಗಟ್ಟಿಯಾಗಿದ್ದರೆ, ಇನ್ನೊಂದು ಕೊನೆ ಯಲ್ಲಿ ವೀರೆಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಯುವರಾಜ್ ಸಿಂಗ್ ಅವ ರಂಥ ಬ್ಯಾಟ್ಸ್‌ಮನ್‌ಗಳು ತಮ್ಮ ಸಹ ಜವಾದ ಆಕ್ರಮಣಕಾರಿ ಆಟವಾಡಲು ಸಾಧ್ಯವಾಗುತ್ತದೆ’ ಎಂದಿರುವ ವಾಸೀಮ್ ‘ಯುವಿ ಎದುರಾಳಿ ಪಡೆಗೆ ಅಪಾಯಕಾರಿ ಎನಿಸುವಂಥ ಕ್ರಿಕೆಟಿಗ. ಕ್ಷೇತ್ರ ರಕ್ಷಣೆಯಲ್ಲಿಯೂ ಅವರು ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ.

ಆದರೆ ಯುವರಾಜ್ ಆಟವು ‘ಬಿಸಿ-ತಣ್ಣಗೆ’ ಎನ್ನುವಂಥ ಏರಿಳಿತದ್ದು. ಅದು ಪಂಜಾಬ್‌ನ ಸಹಜ ಪ್ರಕೃತಿ ಗುಣವೂ ಆಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.