ಚೆನ್ನೈ (ಪಿಟಿಐ): ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ವಿಕೆಟ್ ಪಡೆದ ಮೊದಲನೇ ಓವರ್‌ನ ಕೊನೆಯ ಬೌಲ್ ನನ್ನ ವೃತ್ತಿ ಜೀವನದ ಶ್ರೇಷ್ಠ ಎಸೆತ ಎಂದು ವೆಸ್ಟ್ ಇಂಡೀಸ್ ತಂಡದ ಬೌಲರ್ ರವಿ ರಾಮಪಾಲ್ ಹೇಳಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ 80 ರನ್‌ಗಳ ಅಂತರದಲ್ಲಿ ಭಾರತ ಎದುರು ಸೋಲು ಅನುಭವಿಸಿದ ನಂತರ ಕೆರಿಬಿಯನ್ ತಂಡದ ಭಾರತ ಮೂಲಕ ಆಟಗಾರ ರವಿ ರಾಮಪಾಲ್ ಈ ಹೇಳಿಕೆ ನೀಡಿದ್ದಾರೆ.
ಸಚಿನ್ ಔಟ್ ಎಂದು ಅಂಪೈರ್ ತೀರ್ಪು ನೀಡದಿದ್ದರೂ ಸ್ವತಃ ಸಚಿನ್ ಅಂಪೈರ್ ತೀರ್ಮಾನಕ್ಕೂ ಕಾಯದೇ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಆಗ ನನ್ನ ಜೀವನದ ಬಹು ದೊಡ್ಡ ಕನಸೊಂದು ನನಸಾಯಿತು. ನಿಜಕ್ಕೂ ಸಚಿನ್ ಪ್ರಶಂಸನಾರ್ಹರು. ಎಂದು ರಾಮಪಾಲ್ ಹೇಳಿದ್ದಾರೆ. ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿನ ಜನರ ಮಧ್ಯೆ ಸಚಿನ್ ವಿಕೆಟ್ ಪಡೆದ ದಿನ ಹೆಚ್ಚು ನೆನಪಿನಲ್ಲಿ ಉಳಿಯುವಂತದ್ದು, ಮೊದಲು ಭಾರತ ಬ್ಯಾಟಿಂಗ್ ಆರಂಭಿಸಿದಾಗ ಪಿಚ್ ಹೆಚ್ಚು ಪುಟಿಯುತ್ತಿತ್ತು ಎಂದು ಇದೇ ಮೊದಲ ವಿಶ್ವಕಪ್ ಆಡುತ್ತಿರುವ ರಾಮಪಾಲ್ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.