ADVERTISEMENT

ಸನ್‌ರೈಸರ್ಸ್‌, ರಾಯಲ್ಸ್‌ ಹಣಾಹಣಿ ಇಂದು

ಸ್ಮಿತ್, ವಾರ್ನರ್ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿಯಲಿರುವ ತಂಡಗಳು

ಪಿಟಿಐ
Published 9 ಏಪ್ರಿಲ್ 2018, 6:41 IST
Last Updated 9 ಏಪ್ರಿಲ್ 2018, 6:41 IST
ಬೆನ್ ಸ್ಟೋಕ್ಸ್‌, ಅಜಿಂಕ್ಯ ರಹಾನೆ
ಬೆನ್ ಸ್ಟೋಕ್ಸ್‌, ಅಜಿಂಕ್ಯ ರಹಾನೆ   

ಹೈದರಾಬಾದ್‌: ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷದ ನಿಷೇಧಕ್ಕೆ ಒಳಗಾಗಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್‌ನ ತಮ್ಮ ಮೊದಲ ಪಂದ್ಯದಲ್ಲಿ ಸೋಮವಾರ ಮುಖಾಮುಖಿಯಾಗಲಿವೆ.

ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಆರೋಪಕ್ಕೆ ಒಳಗಾಗಿ ಎರಡು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದ ಸನ್‌ರೈಸರ್ಸ್ ಈ ಬಾರಿ ಮತ್ತೆ ಆಡಲು ಅವಕಾಶ ಪಡೆದುಕೊಂಡಿದೆ. ಆದರೆ ಟೂರ್ನಿ ಆರಂಭವಾಗಲು ಕೆಲವು ದಿನ ಬಾಕ ಇರುವಾಗ ವಾರ್ನರ್ ಅವರನ್ನು ಕಳೆದುಕೊಂಡಿದೆ. ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್‌ ತಂಡವನ್ನು ಮುನ್ನಡೆಸುವರು. ರಾಯಲ್ಸ್ ತಂಡದ ನಾಯಕತ್ವನ್ನು ಅಜಿಂಕ್ಯ ರಹಾನೆ ಅವರಿಗೆ ವಹಿಸಲಾಗಿದೆ.

ಹರಾಜಿನಲ್ಲಿ ಅತ್ಯಧಿಕ ಮೊತ್ತ ಗಳಿಸಿದ ಬೆನ್ ಸ್ಟೋಕ್ಸ್‌ ಮತ್ತು ಭಾರತದ ಆಟಗಾರರ ಪೈಕಿ ಅತಿ ಹೆಚ್ಚು ಮೊತ್ತ ಗಳಿಸಿದ ಜಯದೇವ ಉನದ್ಕತ್ ರಾಯಲ್ಸ್ ತಂಡದಲ್ಲಿದ್ದಾರೆ. ಕರ್ನಾಟಕದ ಕೆ.ಗೌತಮ್ ಮತ್ತು ಸಸೆಕ್ಸ್‌ನ ಜೊಫ್ರಾ ಆರ್ಚರ್‌, ಡಿ ಆರ್ಚಿ, ಹೆನ್ರಿಕ್ ಕ್ಲಾಸೆನ್‌ ಅವರ ಬಲವೂ ಈ ತಂಡಕ್ಕೆ ಇದೆ.

ADVERTISEMENT

ಶಿಖರ್ ಧವನ್‌ ಮತ್ತು ಅಲೆಕ್ಸ್ ಹೇಲ್ಸ್ ಸನ್‌ರೈಸರ್ಸ್ ತಂಡಕ್ಕೆ ಉತ್ತಮ ಆರಂಭ ಒದಗಿಸಬಲ್ಲರು. ಮಧ್ಯಮ ಕ್ರಮಾಂಕಕ್ಕೆ ಮನೀಷ್ ಪಾಂಡೆ ಮತ್ತು ಯೂಸುಫ್ ಪಠಾಣ್‌ ಬಲ ತುಂಬಬಲ್ಲರು. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ರಶೀದ್‌ ಖಾನ್‌ ಮತ್ತು ಶಕೀಬ್ ಅಲ್‌ ಹಸನ್‌ ಇದ್ದಾರೆ.

ಪಂದ್ಯ ಆರಂಭ: ರಾತ್ರಿ 8.00

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.