
ಸಿಂಗಪುರ: ಇಲ್ಲಿ ನಡೆಯುತ್ತಿರುವ ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾನುವಾರ ಬಿ. ಸಾಯಿಪ್ರಣೀತ್ ಮತ್ತು ಕೆ. ಶ್ರೀಕಾಂತ್ ನಡುವೆ ನಡೆದ ಫೈನಲ್ ಹೋರಾಟದಲ್ಲಿ ಸಾಯಿಪ್ರಣೀತ್ ಜಯ ಸಾಧಿಸಿದ್ದಾರೆ.
17–21, 21–17, 21–12 ಸೆಟ್‌ಗಳ ಅಂತರದಲ್ಲಿ ಕೆ. ಶ್ರೀಕಾಂತ್ ವಿರುದ್ಧ ಜಯ ಸಾಧಿಸುವ ಮೂಲಕ ಬಿ. ಸಾಯಿಪ್ರಣೀತ್ ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಕಿರೀಟವನ್ನು ಮುಡಿಗೇರಿಸಿಕೊಂಡರು.
ಶನಿವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಸಾಯಿಪ್ರಣೀತ್ 21–6, 21–8ರಲ್ಲಿ ದಕ್ಷಿಣ ಕೊರಿಯಾದ ಲೀ ಡಾಂಗ್ ಕುಯೆನ್ ಎದುರು ಗೆಲುವು ಸಾಧಿಸಿದರು. ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಶ್ರೀಕಾಂತ್ 21–13, 21–14ರಲ್ಲಿ ಇಂಡೊನೇಷ್ಯಾದ ಆ್ಯಂಟನಿ ಸಿನಿಸುಕ ಗಿಂಟಿಂಗ್ ಅವರನ್ನು ಮಣಿಸಿದರು.
ಬ್ಯಾಡ್ಮಿಂಟನ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಟೂರ್ನಿಯೊಂದರ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಇಬ್ಬರು ಮುಖಾಮುಖಿಯಾಗಿರುವ ಅಪರೂಪದ ಸಾಧನೆ ಮಾಡಿದ್ದರು.
.jpg)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.