ADVERTISEMENT

ಸಿದ್ಧತೆಗೆ ತೆಂಗಿನಕಾಯಿ ಬಳಕೆ!

ಪಿಟಿಐ
Published 4 ಏಪ್ರಿಲ್ 2018, 19:53 IST
Last Updated 4 ಏಪ್ರಿಲ್ 2018, 19:53 IST
ಸಿದ್ಧತೆಗೆ ತೆಂಗಿನಕಾಯಿ ಬಳಕೆ!
ಸಿದ್ಧತೆಗೆ ತೆಂಗಿನಕಾಯಿ ಬಳಕೆ!   

ಗೋಲ್ಡ್‌ ಕೋಸ್ಟ್‌ (ಎಎಫ್‌ಪಿ): ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ  ಉತ್ತಮ ಪ್ರದರ್ಶನ ನೀಡಲು ಕ್ರೀಡಾಪಟುಗಳು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಅವರು ಸಿದ್ಧತೆ ಮಾಡಿಕೊಳ್ಳಲು ಬಳಸುವ ಮಾರ್ಗಗಳು ವಿಶೇಷವಾಗಿರುತ್ತವೆ.

ಅದೇ ರೀತಿ, ಶಾಟ್‌ ಪುಟ್‌ ಹಾಗೂ ಡಿಸ್ಕಸ್‌ ಎಸೆತಗಳ ಅಭ್ಯಾಸಕ್ಕೆ ತೆಂಗಿನಕಾಯಿ ಬಳಸಿದ್ದೆ ಎಂದು ಕುಕ್‌ ಸ್ವಮೂಹ ದ್ವೀಪಗಳಲ್ಲಿ ಒಂದಾದ ರರೊಟೊಂಗಾದ ಕ್ರೀಡಾಪಟು ತೆರೆಪೀ ತಪೊಕಿ ಅವರು ಹೇಳಿದ್ದಾರೆ.

‘ತೆಂಗಿನ ಮರಗಳಿಂದ ತುಂಬಿರುವ ದ್ವೀಪ ನಮ್ಮೂರು. ಡಿಸ್ಕಸ್‌ ಹಾಗೂ ಶಾಟ್‌ ಪುಟ್‌ ಎಸೆತಕ್ಕೆ ಸಿದ್ಧತೆ ಮಾಡಿಕೊಳ್ಳಲು ಯಾವುದೇ ಸಾಮಗ್ರಿಗಳು ನನಗೆ ಲಭ್ಯವಿರಲಿಲ್ಲ. ಆದರೆ, ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಬೇಕೆಂಬ ಛಲದಿಂದ ನಮ್ಮೂರಿನಲ್ಲಿ ಹೇರಳವಾಗಿ ಸಿಗುತ್ತಿದ್ದ ತೆಂಗಿನಕಾಯಿಗಳನ್ನು ಎಸೆದು ಅಭ್ಯಾಸ ಮಾಡಿದೆ. ಸಮತಟ್ಟಾಗಿರುವ ಡಿಸ್ಕಸ್‌ ಎಸೆತಕ್ಕೆ ಹೋಲಿಸಿದರೆ ದುಂಡಗಿ
ರುವ ತೆಂಗಿನಕಾಯಿ ಎಸೆತದ ಅನುಭವ ವಿಭಿನ್ನವಾಗಿತ್ತು’ ಎಂದು ಅವರು ಇಲ್ಲಿನ ಸುದ್ದಿಗಾರರಿಗೆ ತಿಳಿಸಿದರು.  

ADVERTISEMENT

ಈಗ, ತೆರೆಪೀ ಅವರು ಇಟಲಿಯ ಕೋಚ್‌ ಗಸ್‌ ಪುಪೊಲೊ ಅವರ ಬಳಿ ಆಸ್ಟ್ರೇಲಿಯಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

‘ಕಳೆದ ನಾಲ್ಕು ವಾರಗಳಿಂದ ಅಭ್ಯಾಸ ನಡೆಸುತ್ತಿದ್ದು, ತಾಂತ್ರಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದ್ಧೇನೆ. ಆದರೆ, ಸಿದ್ಧತೆ ಮಾಡಿಕೊಳ್ಳಬೇಕಿರುವುದು ಇನ್ನೂ ಸಾಕಷ್ಟಿದೆ’ ಎಂದೂ ತಿಳಿಸಿದ್ದಾರೆ.

ಮಹಿಳಾ ಪೊಲೀಸ್‌ ಅಧಿಕಾರಿಯಾಗಿರುವ ತೆರೆಪೀ, 2004ರ ಅಥೆನ್ಸ್‌ ಹಾಗೂ 2008ರ ಬೀಜಿಂಗ್‌ ಒಲಿಂಪಿಕ್ಸ್‌ಗಳಲ್ಲಿ ಸ್ಪರ್ಧಿಸಿದ್ದರು. 2006ರ ಮೆಲ್ಬರ್ನ್‌ ಗೇಮ್ಸ್‌ನ ಡಿಸ್ಕಸ್‌ ಎಸೆತದಲ್ಲಿ 11ನೇ ಸ್ಥಾನ ಗಳಿಸಿದ್ದರು.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ನಡೆಯುವ ಶಾಟ್‌ ಪುಟ್‌ ಹಾಗೂ ಡಿಸ್ಕಸ್‌ ಎಸೆತಗಳಲ್ಲಿ ಅವರು ಸ್ಪರ್ಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.