ಮೈಸೂರು: ಬೆಂಗಳೂರಿನ ಹೊರೈಜನ್ ಕ್ಲಬ್‌ನ ಸುಚೇತ್ ಪಿ. ಶೆಣೈ ಮತ್ತು ಎಂಟಿಟಿಎದ ಅರ್ಚನಾ ಕಾಮತ್ ಪಿರಿಯಾಪಟ್ಟಣ ತಾಲ್ಲೂಕಿನ ಗುಡ್ಡೇನಹಳ್ಳಿಯ ನಳಂದ ಗುರುಕುಲದಲ್ಲಿ ನಡೆಯುತ್ತಿರುವ ರಾಜ್ಯ ರಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಸಬ್ ಜೂನಿಯರ್ ವಿಭಾಗದಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿ ಯರ ವಿಭಾಗದ ಪ್ರಶಸ್ತಿ ಗೆದ್ದರು.
ಮೈಸೂರು ಟೇಬಲ್ ಟೆನಿಸ್ ಸಂಸ್ಥೆ ಆಯೋಜಿಸಿರುವ ಈ ಟೂರ್ನಿಯಲ್ಲಿ ಶುಕ್ರವಾರ ಸಬ್ ಜೂನಿಯರ್ ಬಾಲಕರ ಫೈನಲ್‌ನಲ್ಲಿ ಸುಚೇತ್ ಪಿ. ಶೆಣೈ 11-8, 11-9, 6-11, 11-2ರಿಂದ ತಮ್ಮದೇ ಕ್ಲಬ್‌ನ ಜಿ.ಎಸ್. ಸಂಕೇತ್ ವಿರುದ್ಧ ಜಯಿಸಿದರು.ಸೆಮಿಫೈನಲ್‌ನಲ್ಲಿ ಸುಚೇತ್ ಶೆಣೈ 11-8, 7-11, 11-5, 11-3ರಿಂದ ಹೊರೈಜನ್ ಕ್ಲಬ್‌ನ ಜಿ. ಸುದೀಪ್ ವಿರುದ್ಧ; ಜಿ.ಎಸ್. ಸಂಕೇತ್ 11-5, 14-12, 11-6ರಿಂದ ಎಂಟಿಟಿಎದ ಎಸ್. ನೀರಜ್ ರಾಜ್ ವಿರುದ್ಧ ಜಯಿಸಿದರು.
ಸಬ್‌ಜೂನಿಯರ್ ಬಾಲಕಿಯರ ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಅರ್ಚನಾ ಕಾಮತ್ 11-13, 10-12, 12-10, 12-10, 16-14ರಿಂದ ಮೈಸೂರಿನ ಪೇರೆಂಟ್ಸ್ ಟೇಬಲ್ ಟೆನಿಸ್ ಸಂಸ್ಥೆಯ ಎಂ.ವಿ. ಸ್ಪೂರ್ತಿ ವಿರುದ್ಧ ಗೆದ್ದರು. ಸೆಮಿಫೈನಲ್‌ನಲ್ಲಿ ಅರ್ಚನಾ 11-6, 11-9, 12-10ರಿಂದ ಎಂಟಿಟಿಎದ ಸೇಜಲ್ ಕೌಶಿಕ್ ವಿರುದ್ಧ; ಎಂ.ವಿ. ಸ್ಪೂರ್ತಿ 11-8, 11-4, 11-8ರಿಂದ ಹುಬ್ಬಳ್ಳಿಯ ಮಹಾರಾಷ್ಟ್ರ ಮಂಡಳದ ಗಾಯತ್ರಿ ಟಂಕಸಾಲಿ ವಿರುದ್ಧ ಗೆಲುವು ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.