ADVERTISEMENT

ಸೂಪರ್ ಕಪ್‌ ಫುಟ್‌ಬಾಲ್‌: ಈಸ್ಟ್‌ ಬೆಂಗಾಲ್‌ಗೆ ಮುಂಬೈ ಸವಾಲು

ಪಿಟಿಐ
Published 4 ಏಪ್ರಿಲ್ 2018, 19:30 IST
Last Updated 4 ಏಪ್ರಿಲ್ 2018, 19:30 IST

ಭುವನೇಶ್ವರ (ಪಿಟಿಐ): ಈಸ್ಟ್ ಬೆಂಗಾಲ್‌ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಸೂಪರ್ ಕಪ್‌ ಫುಟ್‌ಬಾಲ್‌ ಟೂರ್ನಿಯ ಪ್ರಿ ಕ್ವಾರ್ಟರ್‌
ಫೈನಲ್‌ನಲ್ಲಿ ಗುರುವಾರ ಸೆಣಸಲಿವೆ.

ಮಹಮ್ಮದ್‌ ರಫೀಕ್‌ ತಂಡಕ್ಕೆ ಮರಳಿರುವುದು ಈಸ್ಟ್ ಬೆಂಗಾಲ್‌ಗೆ ಬಲ ತುಂಬಿದ್ದು ಗೆಲ್ಲುವ ವಿಶ್ವಾಸ ಮೂಡಿಸಿದೆ.

‘ಉತ್ತಮ ಆಟಗಾರರನ್ನು ಹೊಂದಿರುವ ಈಸ್ಟ್ ಬೆಂಗಾಲ್‌ ತಂಡ ಬಲಿಷ್ಠವಾಗಿದೆ. ನಾಕೌಟ್‌ ಹಂತದ ಈ ಪಂದ್ಯದಲ್ಲಿ ತಂಡ ಉತ್ತಮ ತಂತ್ರಗಳನ್ನು ಬಳಸಿ ಗೆಲ್ಲುವ ಪ್ರಯತ್ನ ಮಾಡಲಿದೆ’ ಎಂದು ಕೋಚ್‌ ಖಾಲಿದ್‌ ಜಮೀಲ್‌ ಹೇಳಿದರು.

ADVERTISEMENT

‘ಇಂಡಿಯನ್‌ ಆ್ಯರೋಸ್‌ ವಿರುದ್ಧ ಸೋತ ನಂತರ ತಂಡದ ಆಟಗಾರರು ನಿರಾಸೆಗೊಂಡಿದ್ದರು. ಆ ಬೇಸರ ಮರೆತು ಇದೀಗ ಮತ್ತೊಂದು ಸವಾಲಿಗೆ ಸಜ್ಜಾಗಿದ್ದೇವೆ. ಈ ಪಂದ್ಯದಲ್ಲಿ ಗೆಲ್ಲಲು ಕಠಿಣ ಅಭ್ಯಾಸ ನಡೆಸಲಾಗಿದೆ’ ಎಂದು ಮುಂಬೈ ತಂಡದ ಕೊಚ್‌ ಅಲೆಕ್ಸಾಂಡರ್‌ ಗುಮರೆಜ್‌ ಹೇಳಿದರು.

ಖಾಬ್ರಾ ಜೊತೆ ಒಪ್ಪಂದ ಮುಂದುವರಿಕೆ: ಹರ್ಮನ್‌ಜೋತ್‌ ಖಾಬ್ರಾ ಜೊತೆಗಿನ ಒಪ್ಪಂದವನ್ನು ಮುಂದುವರಿಸಲು ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ನಿರ್ಧರಿಸಿದೆ. ಐಎಸ್‌ಎಲ್‌ನಲ್ಲಿ ತಂಡದ ರಕ್ಷಣಾ ವಿಭಾಗಕ್ಕೆ ಖಾಬ್ರಾ ಬಲ ತುಂಬಿದ್ದರು. 2009ರಿಂದ ಆರು ವರ್ಷ ಈಸ್ಟ್ ಬೆಂಗಾಲ್‌ ತಂಡದಲ್ಲಿ ಆಡಿದ್ದ ಖಾಬ್ರಾ ನಂತರ ಚೆನ್ನೈಯಿನ್‌ ಎಫ್‌ಸಿ ತಂಡ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.