ಚೆನ್ನೈ (ಪಿಟಿಐ): ಹಿಂದಿನ ಮೂರೂ ಪಂದ್ಯಗಲ್ಲಿ ಗೆಲುವಿನ ಓಟ ಮುಂದುವರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ ರಾಯಲ್ಸ್ ತಂಡಗಳು ಬುಧವಾರ ಸಂಜೆ ಮುಖಾಮುಖಿಯಾಗಲಿವೆ.ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಟ್ವೆಂಟಿ-20 ಟೂರ್ನಿಯ ಈ ಹಣಾಹಣಿಯಲ್ಲಿ ಸೂಪರ್ ಕಿಂಗ್ಸ್ ನಾಯಕ ದೋನಿ ಕೈ ಮೇಲೊ? ರಾಯಲ್ಸ್ ತಂಡದ ನಾಯಕ ಶೇನ್ ವಾರ್ನ್ ಕೈ ಮೇಲೊ? ಎಂಬುದು ಕುತೂಹಲ ಕೆರಳಿಸಿದೆ. ಕಾರಣ ಈ ಎರಡೂ ತಂಡಗಳು ಸ್ಥಿರ ಪ್ರದರ್ಶನ ನೀಡುತ್ತಾ ಮುಂದೆ ಸಾಗುತ್ತಿವೆ.
ಇದಕ್ಕೆ ಪ್ರಭಾವಿ ನಾಯಕತ್ವವೇ ಕಾರಣ. ರಾಜಸ್ತಾನ ತಂಡ 11 ಪಾಯಿಂಟ್‌ಗಳೊಂದಿಗೆ ವಿಶ್ವಾಸದಿಂದ ಬೀಗುತ್ತಿದೆ. ದೋನಿ ಪಡೆ 10 ಪಾಯಿಂಟ್‌ಗಳೊಂದಿಗೆ ಹಿಂದೆಯೇ ಇದೆ. ಆದರೆ ಶೇನ್ ವಾರ್ನ್ ಪಡೆಗೆ ಲಭಿಸಿರುವ ಹಿಂದಿನ ಸತತ ಮೂರು ಗೆಲುವುಗಳು ತವರಿನ ಪಿಚ್‌ನಲ್ಲಿ ಬಂದಿವೆ.
ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಕೂಡ ಸೋಲಿಸಿದೆ. ಇದಕ್ಕೆ ಕಾರಣ ರಾಯಲ್ಸ್ ತಂಡದ ಸ್ಪಿನ್ ಬಲ. ನಾಯಕ ವಾರ್ನ್ ಹಾಗೂ ಜಾನ್ ಬೋಥಾ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಬೋಥಾ ಅವರು ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಬಲ ತುಂಬುತ್ತಿದ್ದಾರೆ.
ಬೋಥಾ ಹೊರತುಪಡಿಸಿದರೆ ಈ ತಂಡದ ಉಳಿದ ಯಾವುದೇ ಬ್ಯಾಟ್ಸ್‌ಮನ್ ಅರ್ಧ ಶತಕದ ಗೆರೆ ಕೂಡ ದಾಟಿಲ್ಲ. ಆದರೆ ಉಳಿದ ಎಲ್ಲರಿಂದ ಸ್ಥಿರ ಪ್ರದರ್ಶನ ಮೂಡಿಬರುತ್ತಿದೆ. ಕೊನೆಯ ಪಂದ್ಯದಲ್ಲಿ ಗೆಲ್ಲಲು ಕಾರಣ ರಾಸ್ ಟೇಲರ್ ಸ್ಫೋಟಕ ಬ್ಯಾಟಿಂಗ್.
ಸ್ಪಿನ್ ದಂತಕತೆ ವಾರ್ನ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ನಾಲ್ಕು ವರ್ಷಗಳಾದವು. ಅವರಿಗೆ 41 ವರ್ಷ ತುಂಬಿದೆ. ಆದರೂ ಅಂಗಳದಲ್ಲಿ ಲವಲವಿಕೆಯಿಂದ ತಂಡವನ್ನು ಮುನ್ನಡೆಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಸಮತೋಲನದಿಂದ ಕೂಡಿದ ತಂಡ. ಈ ತಂಡದ ಪ್ರಮುಖ ಬಲ ಬ್ಯಾಟಿಂಗ್.
ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್
ಮಹೇಂದ್ರ ಸಿಂಗ್ ದೋನಿ (ನಾಯಕ), ಮುರಳಿ ವಿಜಯ್, ಮೈಕ್ ಹಸ್ಸಿ, ಸುರೇಶ್ ರೈನಾ, ಶ್ರೀಕಾಂತ್ ಅನಿರುದ್ಧ್, ಎಸ್. ಬದರೀನಾಥ್, ಫಾಫ್ ಡು ಪ್ಲೆಸಿಸ್, ಅಭಿನವ್ ಮುಕುಂದ್, ಜಾರ್ಜ್ ಬೈಲಿ, ಅಲ್ಬಿ ಮಾರ್ಕೆಲ್, ಸ್ಕಾಟ್ ಸ್ಟೈರಿಸ್, ಟಿಮ್ ಸೌಥಿ, ಆರ್. ಅಶ್ವಿನ್, ಬೆನ್ ಹಿಲ್ಫೆನಾಸ್, ಜೋಗಿಂದರ್ ಶರ್ಮ, ನುವಾನ್ ಕುಲಶೇಖರ, ಸುದೀಪ್ ತ್ಯಾಗಿ, ಸೂರಜ್ ರಂದೀವ್ ಹಾಗೂ ಶಾದಾಬ್ ಜಕಾತಿ.
ರಾಜಸ್ತಾನ ರಾಯಲ್ಸ್
ಶೇನ್ ವಾರ್ನ್ (ನಾಯಕ), ರಾಹುಲ್ ದ್ರಾವಿಡ್, ಶೇನ್ ವಾಟ್ಸನ್, ರಾಸ್ ಟೇಲರ್, ಜಾನ್ ಬೋಥಾ, ಶಾನ್ ಟೇಟ್, ಅಮಿತ್ ಸಿಂಗ್, ಸ್ವಪ್ನಿಲ್ ಅಸ್ನೋಡ್ಕರ್, ಸ್ಟುವರ್ಟ್ ಬಿನ್ನಿ, ದೀಪಕ್ ಚಹಾರ್, ಅಂಕಿತ್ ಚವಾಣ್, ಆಕಾಶ್ ಚೋಪ್ರಾ, ಆದಿತ್ಯ ಡೋಲೆ, ಫೈಜ್ ಫಜಲ್, ಮನೇರಿಯಾ, ಸಿದ್ದಾರ್ಥ್ ತ್ರಿವೇದಿ, ಸುಮಿತ್ ನರ್ವಾಲ್, ಪಂಕಜ್ ಸಿಂಗ್, ಅಮಿತ್ ಪಾಣಿಕರ್, ಆಜಿಂಕ್ಯ ರಹಾನೆ ಹಾಗೂ ಅಭಿಷೇಕ್ ರಾವತ್.
ಪಂದ್ಯ ಆರಂಭ: ಸಂಜೆ ನಾಲ್ಕು ಗಂಟೆಗೆ; ನೇರ ಪ್ರಸಾರ: ಸೆಟ್ ಮ್ಯಾಕ್ಸ್
ತಂಡ ಪಂದ್ಯ ಗೆಲುವು ಸೋಲು ರದ್ದು ಪಾಯಿಂಟ್ ರನ್‌ರೇಟ್
ಮುಂಬೈ ಇಂಡಿಯನ್ಸ್ 8 6 2 0 12 +0.582
ರಾಜಸ್ತಾನ ರಾಯಲ್ಸ್ 9 5 3 1 11 -0.145
ಕೋಲ್ಕತ್ತ ನೈಟ್‌ರೈಡರ್ಸ್ 8 5 3 0 10 +0.530
ಚೆನ್ನೈ ಸೂಪರ್ ಕಿಂಗ್ಸ್ 8 5 3 0 10 +0.247
ರಾಯಲ್ ಚಾಲೆಂಜರ್ಸ್ 8 4 3 1 9 -0.052
ಕೊಚ್ಚಿ ಟಸ್ಕರ್ಸ್ 9 4 5 0 8 -0.542
ಡೆಕ್ಕನ್ ಚಾರ್ಜರ್ಸ್ 8 3 5 0 6 +0.048
ದೆಹಲಿ ಡೇರ್‌ಡೆವಿಲ್ಸ್ 9 3 6 0 6 -0.262
ಕಿಂಗ್ಸ್ ಇಲೆವೆನ್ ಪಂಜಾಬ್ 7 3 4 0 6 -0.398
ಪುಣೆ ವಾರಿಯರ್ಸ್ 8 2 6 0 4 -0.089
* ಸೋಮವಾರದ ಪಂದ್ಯಗಳ ಅಂತ್ಯಕ್ಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.