ADVERTISEMENT

ಸೆಮಿಫೈನಲ್‌ಗೆ ಮುಂಬೈ, ಪಂಜಾಬ್

ರಣಜಿ: ತರುವರ್ ಕೊಹ್ಲಿ ಭರ್ಜರಿ ತ್ರಿಶತಕ

​ಪ್ರಜಾವಾಣಿ ವಾರ್ತೆ
Published 10 ಜನವರಿ 2013, 19:59 IST
Last Updated 10 ಜನವರಿ 2013, 19:59 IST
ಬರೋಡ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುರುವಾರ ಶತಕ ಗಳಿಸಿದ ಮುಂಬೈ ತಂಡದ ಕೌಸ್ತುಭ್ ಪವಾರ್ ಅವರ ಬ್ಯಾಟಿಂಗ್ ವೈಖರಿ 	-ಪಿಟಿಐ ಚಿತ್ರ
ಬರೋಡ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುರುವಾರ ಶತಕ ಗಳಿಸಿದ ಮುಂಬೈ ತಂಡದ ಕೌಸ್ತುಭ್ ಪವಾರ್ ಅವರ ಬ್ಯಾಟಿಂಗ್ ವೈಖರಿ -ಪಿಟಿಐ ಚಿತ್ರ   

ಮುಂಬೈ: 39 ಬಾರಿಯ ಚಾಂಪಿಯನ್ ಮುಂಬೈ ಹಾಗೂ ಪಂಜಾಬ್ ತಂಡಗಳು ರಣಜಿ ಟ್ರೋಫಿ  ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ತಲುಪಿವೆ.  
ವಾಂಖೇಡೆ ಕ್ರೀಡಾಂಗಣದಲ್ಲಿ ಗುರುವಾರ ಕೊನೆಗೊಂಡ ಬರೋಡ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಮುಂಬೈ ನಾಲ್ಕರ ಘಟ್ಟ ಪ್ರವೇಶಿಸಿತು.

ಪಂದ್ಯದ ಅಂತಿಮ ದಿನ ಮುಂಬೈ ನೀಡಿದ 670 ರನ್‌ಗಳ ಗುರಿಗೆ ಉತ್ತರವಾಗಿ ಬರೋಡ ತನ್ನ ಎರಡನೇ ಇನಿಂಗ್ಸ್‌ನಲ್ಲಿ 42 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಇದಕ್ಕೂ ಮೊದಲು ಮುಂಬೈ ತನ್ನ ಎರಡನೇ ಇನಿಂಗ್ಸ್‌ನಲ್ಲಿ 87 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 295 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. 
ಮುಂಬೈ ತಂಡದವರು ಸೆಮಿಫೈನಲ್‌ನಲ್ಲಿ ಸರ್ವಿಸಸ್ ತಂಡವನ್ನು ಎದುರಿಸಲಿದ್ದಾರೆ. ಈ ಪಂದ್ಯ ನವದೆಹಲಿಯ ಪಾಲಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಜಮ್ಶೆಡ್‌ಪುರದಲ್ಲಿ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಪಂಜಾಬ್ ನಾಲ್ಕರ ಘಟ್ಟ ತಲುಪಿದೆ. ಜಾರ್ಖಂಡ್‌ನ 401 ರನ್‌ಗಳಿಗೆ ಉತ್ತರವಾಗಿ ಪಂಜಾಬ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 229 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 699 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ತರುವರ್ ಕೊಹ್ಲಿ ಅಜೇಯ ತ್ರಿಶತಕ ಗಳಿಸಿದರು. 609 ಎಸೆತಗಳನ್ನು ಎದುರಿಸಿದ ಅವರು 34 ಬೌಂಡರಿ ಹಾಗೂ 2 ಸಿಕ್ಸರ್ ಗಳಿಸಿದರು. ಈ ತಂಡದವರ ರಾಜ್‌ಕೋಟ್‌ನಲ್ಲಿ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡ ಎದುರಿಸಲಿದ್ದಾರೆ.

ಸಂಕ್ಷಿಪ್ತ ಸ್ಕೋರ್:
ಮುಂಬೈ: ಮೊದಲ ಇನಿಂಗ್ಸ್ 204 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 645 ಡಿಕ್ಲೇರ್ಡ್ ಹಾಗೂ 87 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 295 ಡಿಕ್ಲೇರ್ಡ್ ( ಕೌಸ್ತುಭ್ ಪವಾರ್ 115, ಹಿಕೆನ್ ಷಾ 79; ಭಾರ್ಗವ್ ಭಟ್ 106ಕ್ಕೆ3); ಬರೋಡ: ಮೊದಲ ಇನಿಂಗ್ಸ್ 102.4 ಓವರ್‌ಗಳಲ್ಲಿ 271 ಹಾಗೂ 42 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 137 (ಸೌರಭ್ ವಾಕಸ್ಕರ್ 42, ಆದಿತ್ಯ ವಾಗ್ಮೋಡೆ 60, ಅಂಕಿತ್ ಚವಾಣ್ 42ಕ್ಕೆ2). ಫಲಿತಾಂಶ: ಪಂದ್ಯ ಡ್ರಾ. ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಮುಂಬೈ ಸೆಮಿಫೈನಲ್‌ಗೆ.

ಜಾರ್ಖಂಡ್: ಮೊದಲ ಇನಿಂಗ್ಸ್ 149 ಓವರ್‌ಗಳಲ್ಲಿ 401 ಹಾಗೂ 13 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 33; ಪಂಜಾಬ್: ಮೊದಲ ಇನಿಂಗ್ಸ್ 229 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 699 ಡಿಕ್ಲೇರ್ಡ್ ( ತರುವರ್ ಕೊಹ್ಲಿ ಔಟಾಗದೆ 300, ಉದಯ್ ಕೌಲ್ ಔಟಾಗದೆ 113). ಫಲಿತಾಂಶ: ಪಂದ್ಯ ಡ್ರಾ. ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಪಂಜಾಬ್ ಸೆಮಿಫೈನಲ್‌ಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.