ADVERTISEMENT

ಸೆಮಿಫೈನಲ್‌ಗೆ ಸಾನಿಯಾ – ಬೋಪಣ್ಣ ಜೋಡಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2016, 7:17 IST
Last Updated 13 ಆಗಸ್ಟ್ 2016, 7:17 IST
ಸೆಮಿಫೈನಲ್‌ಗೆ ಸಾನಿಯಾ – ಬೋಪಣ್ಣ ಜೋಡಿ
ಸೆಮಿಫೈನಲ್‌ಗೆ ಸಾನಿಯಾ – ಬೋಪಣ್ಣ ಜೋಡಿ   

ರಿಯೊ ಡಿ ಜನೈರೊ (ಪಿಟಿಐ): ಒಲಿಂಪಿಕ್ಸ್‌ ಟೆನಿಸ್‌ನ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ಮತ್ತು ಹೀಥರ್‌ ವ್ಯಾಟ್ಸನ್‌ ಜೋಡಿಯನ್ನು ಮಣಿಸಿರುವ ಭಾರತದ ಸಾನಿಯಾ ಮಿರ್ಜಾ ಮತ್ತು ರೋಹನ್‌ ಬೋಪಣ್ಣ ಜೋಡಿ ಸೆಮಿಫೈನಲ್‌ ಪ್ರವೇಶಿಸಿದೆ.

ಕ್ವಾರ್ಟರ್‌ ಫೈನಲ್‌ನಲ್ಲಿ ಸಾನಿಯಾ– ಬೋಪಣ್ಣ ಜೋಡಿಯು ಆ್ಯಂಡಿ ಮರ್ರೆ ಮತ್ತು  ಹೀಥರ್‌ ವ್ಯಾಟ್ಸನ್‌ ಅವರನ್ನು 67 ನಿಮಿಷಗಳಲ್ಲಿ 6– 4, 6– 4 ಸೆಟ್‌ಗಳಿಂದ ಮಣಿಸಿದರು.

ಶುಕ್ರವಾರ ಆಸ್ಟ್ರೇಲಿಯಾದ ಸಮಂತಾ ಸೊಸುರ್‌ ಮತ್ತು ಜಾನ್‌ ಪೀರ್ಸ್‌ ಜೋಡಿಯನ್ನು 7– 5, 6– 4 ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಸಾನಿಯಾ – ಬೋಪಣ್ಣ ಜೋಡಿ ಕ್ವಾರ್ಟರ್‌ ಫೈನಲ್‌ನಲ್ಲಿ ಗೆದ್ದು ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಪದಕದ ಭರವಸೆಯನ್ನು ಗಟ್ಟಿಯಾಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT