ಬೆಂಗಳೂರು: ಭರ್ಜರಿ ಪ್ರದರ್ಶನ ತೋರಿದ ಸೌತ್ ಇಂಡಿಯಾ ತಂಡ ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಸಿ' ಡಿವಿಷನ್ ಫುಟ್‌ಬಾಲ್ ಲೀಗ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ 4-0ರಲ್ಲಿ ಯಂಗ್ ಜೆಮ್ಸ ವಿರುದ್ಧ ಗೆಲುವು ಪಡೆದಿದೆ.
ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸೌತ್ ಇಂಡಿಯಾ ತಂಡದ ದಿನೇಶ್ 11ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸುವ ಮೂಲಕ ಆರಂಭಿಕ ಮುನ್ನಡೆ ತಂದು ಕೊಟ್ಟರು. ಬಳಿಕ ವಿನೋದ್ (42, 48ನೇ ನಿ) ಎರಡು ಗೋಲುಗಳನ್ನು ತಂದಿತ್ತು ಮುನ್ನಡೆಯನ್ನು 3-0ಗೆ ಹೆಚ್ಚಿಸಿದರು. 53ನೇ ನಿಮಿಷದಲ್ಲಿ ವಿಘ್ನೇಶ್ ಅವರ ಗೋಲಿನ ಮೂಲಕ ಸೌತ್ ಇಂಡಿಯಾ ತಂಡ 4-0ರಲ್ಲಿ ಪಂದ್ಯವನ್ನು ಗೆದ್ದುಕೊಂಡಿತು.
ದಿನದ ಇತರ ಪಂದ್ಯಗಳಲ್ಲಿ ಯಂಗ್ ಚಾಲೆಂಜರ್ಸ್ 2-1 ಗೋಲುಗಳಿಂದ ಜಾಲಿ ಬ್ರದರ್ಸ್ ವಿರುದ್ಧವೂ; ಲಾ ಮಸಿಯಾ 4-1ರಲ್ಲಿ ಮುಸ್ಲಿಮ್ ಹೀರೋಸ್ ಮೇಲೂ ಗೆಲುವು ಸಾಧಿಸಿದವು.
ಬುಧವಾರದ ಪಂದ್ಯಗಳಲ್ಲಿ ಆ್ಯಕ್ಟಿವ್ ಯೂನಿಯನ್ - ವೆಟರನ್ಸ್, ಹಿಂದು ಸೋಷಿಯಲ್-ಕೊಂಕಣ ಹಾಗೂ ಶೈನಿಂಗ್ ಸ್ಟಾರ್-ರೇಂಜರ್ಸ್ ತಂಡಗಳು ಪೈಪೋಟಿ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.