ಮುಂಬೈ (ಪಿಟಿಐ): ಐಪಿಎಲ್‌ನಲ್ಲಿ ನಡೆದಿದೆ ಎನ್ನಲಾದ ಸ್ಪಾಟ್ ಫಿಕ್ಸಿಂಗ್‌ಗೆ ಸಂಬಂಧಿಸಿದ ಆರೋಪದ ಬಗ್ಗೆ ತನಿಖೆ ನಡೆಸಲಾಗಿರುವ ವರದಿಯನ್ನು ಬಿಸಿಸಿಐ ಶಿಸ್ತು ಸಮಿತಿಗೆ ಒಪ್ಪಿಸಲಾಗಿದೆ ಎಂದು ಲೀಗ್‌ನ ಮುಖ್ಯಸ್ಥ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
`ಟಿವಿ ಚಾನೆಲ್ ನಡೆಸಿದ ಮಾರುವೇಷದ ಕಾರ್ಯಾಚರಣೆಯ ಸಂಬಂಧ ತನಿಖೆ ನಡೆಸಿದ ವಿಚಾರಣಾ ಆಯೋಗದ ಮುಖ್ಯಸ್ಥ ರವಿ ಸವಾನಿ ತಮ್ಮ ವರದಿಯನ್ನು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್‌ಗೆ ನೀಡಿದ್ದಾರೆ. ಅದನ್ನು ಈಗ ಮಂಡಳಿಯ ಶಿಸ್ತು ಸಮಿತಿಗೆ ಒಪ್ಪಿಸಲಾಗಿದೆ~ ಎಂದು ಅವರು ವಿವರಿಸಿದ್ದಾರೆ.
ಮೂರು ಸದಸ್ಯರ ಶಿಸ್ತು ಸಮಿತಿಯಲ್ಲಿ ಶ್ರೀನಿವಾಸನ್, ಮಂಡಳಿಯ ಉಪಾಧ್ಯಕ್ಷರಾದ ಅರುಣ್ ಜೇಟ್ಲಿ ಹಾಗೂ ನಿರಂಜನ್ ಶಾ ಇದ್ದಾರೆ.
ಮಾರುವೇಷದ ಕಾರ್ಯಾಚರಣೆ ನಡೆಸಿದ್ದ `ಇಂಡಿಯಾ ಟಿ.ವಿ~ ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಮೋಸದಾಟ ನಡೆಯುತ್ತಿದೆ ಎಂದು ಹೇಳಿಕೊಂಡಿತ್ತು. ಅದಕ್ಕೆ ಸಮರ್ಪಕವಾದ ದಾಖಲೆಗಳನ್ನು ನೀಡಿತ್ತು.
ಈ ಕಾರ್ಯಾಚರಣೆ ಬಳಿಕ ಡೆಕ್ಕನ್ ಚಾರ್ಜರ್ಸ್‌ನ ಟಿ.ಪಿ. ಸುಧೀಂದ್ರ, ಪುಣೆ ವಾರಿಯರ್ಸ್‌ನ ಮೋನಿಷ್ ಮಿಶ್ರಾ, ಕಿಂಗ್ಸ್ ಇಲೆವೆನ್ ಪಂಜಾಬ್‌ನ ಶಲಭ್ ಶ್ರೀವಾಸ್ತವ, ಅಮಿತ್ ಯಾದವ್ ಹಾಗೂ ಅಭಿನವ್ ಬಾಲಿ ಅವರನ್ನು ಬಿಸಿಸಿಐ ಅಮಾನತುಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.