ADVERTISEMENT

ಸ್ಪೀಡ್ ಸ್ಕೇಟಿಂಗ್: ಪೃಥ್ವಿರಾಜ್, ಹೃತಿಕ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಬೆಂಗಳೂರು: ಕರ್ನಾಟಕದ ಪೃಥ್ವಿರಾಜ್ ದೇಶ್‌ಮುಖ್, ಹೃತಿಕ್ ಕರಡಿ ಹಾಗೂ ಆದಿತ್ಯ ಎಸ್.ರಾವ್ ಮಂಗಳವಾರ ಇಲ್ಲಿ ಆರಂಭವಾದ 49ನೇ ರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನ ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಚೆನ್ನಮ್ಮನ ಕೆರೆ ಅಚ್ಚುಕಟ್ಟುವಿನಲ್ಲಿರುವ ಬಿಬಿಎಂಪಿ ಸ್ಕೇಟಿಂಗ್ ರಿಂಕ್‌ನಲ್ಲಿ ನಡೆದ ರಿಂಕ್ ರೇಸ್-111 (ಇನ್‌ಲೈನ್ ಸ್ಕೇಟರ್) 300 ಮೀಟರ್‌ನ 12-14 ವರ್ಷದೊಳಗಿನವರ ವಿಭಾಗದಲ್ಲಿ ಪೃಥ್ವಿ ಮೊದಲ ಸ್ಥಾನ ಪಡೆದರು. ಅವರು ಈ ದೂರವನ್ನು 28,97 ಸೆಕೆಂಡ್‌ಗಳಲ್ಲಿ ಕ್ರಮಿಸಿದರು.

ಪೃಥ್ವಿರಾಜ್ ಆಂಧ್ರಪ್ರದೇಶದ ಅಬ್ದುಲ್ ಖಾನ್ ಹಾಗೂ ದೆಹಲಿಯ ರಾಘವ್ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದರು.

10-12 ವರ್ಷದೊಳಗಿನವರ ವಿಭಾಗದಲ್ಲಿ ಸೊಗಸಾದ ಪ್ರದರ್ಶನ ತೋರಿದ ರಾಜ್ಯದ ಆದಿತ್ಯ ಎಸ್.ರಾವ್ (30.04 ಸೆ.) ಅಗ್ರಸ್ಥಾನ ಸಂಪಾದಿಸಿದರು. 8-10 ವರ್ಷದೊಳಗಿನವರ ವಿಭಾಗದಲ್ಲಿ ಕರ್ನಾಟಕದ ಹೃತಿಕ್ ಕರಡಿ (31.75 ಸೆ.) ಮೊದಲ ಸ್ಥಾನ ಪಡೆದು ಚಿನ್ನದ ಪದಕ ಜಯಿಸಿದರು. ಅವರು ಗುಜರಾತ್‌ನ ಪ್ರಗ್ಯಾನ್ ಹಾಗೂ ದೆಹಲಿಯ ಅಭಿಷೇಕ್ ನೀಡಿದ ಸವಾಲನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾದರು.

ರಾಜ್ಯದ ಆಕಾಶ್ ಆರಾಧ್ಯ (16 ವರ್ಷ) ಹಾಗೂ ಧನುಶ್ ಬಾಬು (14-16 ವರ್ಷ) ಕಂಚಿನ ಪದಕ ಜಯಿಸಿದರು.
ಬಾಲಕಿಯರ ವಿಭಾಗದಲ್ಲಿ 16 ವರ್ಷಕ್ಕಿಂತ ಮೇಲಿನವರ ವಿಭಾಗದಲ್ಲಿ ಕರ್ನಾಟಕದ ವರ್ಷಾ ಪುರಾಣಿಕ್ ಬೆಳ್ಳಿ ಗೆದ್ದರು. ತಮಿಳುನಾಡಿನ ಸೃಷ್ಟಿ (29.87 ಸೆ.) ಮೊದಲ ಸ್ಥಾನ ಪಡೆದರು.

ರಾಜ್ಯದ ಇತರ ಸ್ಪರ್ಧಿಗಳಾದ ಸೀಲಿಯಾ ಸಮಿತ್ (12-14 ವರ್ಷ) ಹಾಗೂ ತೀರ್ಥ ಸುಬ್ಬಯ್ಯ (10-12 ವರ್ಷ) ಕೂಡ ಬೆಳ್ಳಿ ಪದಕ ಜಯಿಸಿದರು.

ಫಲಿತಾಂಶ ಇಂತಿದೆ: ರಿಂಕ್ ರೇಸ್-111 (ಇನ್‌ಲೈನ್ ಸ್ಕೇಟರ್) 300 ಮೀಟರ್: ಬಾಲಕರ ವಿಭಾಗ (16 ವರ್ಷ): ವಿಕ್ರಮ್ (ಮಹಾರಾಷ್ಟ್ರ)-1, ಕೆ.ಎಸ್.ಸ್ಟೀಫನ್ ಪಾಲ್ (ಆಂಧ್ರಪ್ರದೇಶ)-2, ಆಕಾಶ್ ಆರಾಧ್ಯ (ಕರ್ನಾಟಕ)-3, ಸಮಯ: 27.58.
14-16 ವರ್ಷ: ಕೆ.ಹರಿಹರನ್ (ತಮಿಳುನಾಡು)-1, ಸರ್ವಪ್ರೀತ್ ಸಿಂಗ್ (ದೆಹಲಿ)-2, ಧನುಶ್ ಬಾಬು (ಕರ್ನಾಟಕ)-3, ಸಮಯ: 27.82.
12-14 ವರ್ಷ: ಪೃಥ್ವಿರಾಜ್ ದೇಶ್‌ಮುಖ್ (ಕರ್ನಾಟಕ)-1, ಅಬ್ದುಲ್ ಖಾನ್ (ಆಂಧ್ರಪ್ರದೇಶ)-2, ರಾಘವ್ (ದೆಹಲಿ)-3, ಸಮಯ: 28.97.
10-12 ವರ್ಷ: ಆದಿತ್ಯ            ಎಸ್.ರಾವ್ (ಕರ್ನಾಟಕ)-1, ಎಂ.ವಿ.ವಿಗ್ನೇಶ್ (ತಮಿಳುನಾಡು)-2, ಕೆ.ಚೈತನ್ಯ ಕುಮಾರ್ (ಆಂಧ್ರಪ್ರದೇಶ)-3, ಸಮಯ: 30.04.
8-10 ವರ್ಷ: ಹೃತಿಕ್ ಕರಡಿ (ಕರ್ನಾಟಕ)-1, ಪ್ರಗ್ಯಾನ್ (ಗುಜರಾತ್)-2, ಅಭಿಷೇಕ್ (ದೆಹಲಿ)-3, ಸಮಯ: 31.75.
ಬಾಲಕಿಯರು: 16 ವರ್ಷ: ಸೃಷ್ಟಿ (ತಮಿಳುನಾಡು)-1, ವರ್ಷಾ ಪುರಾಣಿಕ್ (ಕರ್ನಾಟಕ)-2, ಮಾನಸಿ ಭೀಡೆ (ಮಹಾರಾಷ್ಟ್ರ)-3, ಸಮಯ: 29.87
 14-16 ವರ್ಷ: ದೀಪಾಲಿ ನಾಯ್ಕ (ಮಹಾರಾಷ್ಟ್ರ)-1, ಆಶ್ನಿನಿ ಶಾ (ಗುಜರಾತ್)-2, ಶಿವಾನಿ ಶೆಟ್ಟಿ (ಮಹಾರಾಷ್ಟ್ರ)-3, ಸಮಯ: 30.81
12-14 ವರ್ಷ: ಪೂಜಾ ಪಟೇಲ್ (ಗುಜರಾತ್)-1, ಸೀಲಿಯಾ ಸಮಿತ್ (ಕರ್ನಾಟಕ)-2, ರುತ್ವಿ ಅಮಿನ್ (ಗುಜರಾತ್)-3, ಸಮಯ:  30.40
10-12 ವರ್ಷ: ಎಂ.ಎಸ್.ತೇಜಸ್ವಿ (ಆಂಧ್ರಪ್ರದೇಶ)-1, ತೀರ್ಥ ಸುಬ್ಬಯ್ಯ (ಕರ್ನಾಟಕ)-2, ಅಮ್ರಿನ್ ಖಾನ್ (ಆಂಧ್ರಪ್ರದೇಶ)-3, ಸಮಯ: 31.63
8-10 ವರ್ಷ:ಮನಸ್ವಿನಿ ಪಿಳ್ಳೈ ( ಗುಜರಾತ್)-1, ಸೃಷ್ಟಿ ಅಗರ್‌ವಾಲ್ (ಗುಜರಾತ್)-2, ಪ್ರಿಯಾ ಸ್ರೀಲಾಲ್ (ಆಂಧ್ರಪ್ರದೇಶ)-3, ಸಮಯ: 34.01

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.