ADVERTISEMENT

ಸ್ಮರಣೀಯ ಇನಿಂಗ್ಸ್‌: ಮೆಕ್ಲಮ್‌

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2014, 19:30 IST
Last Updated 18 ಫೆಬ್ರುವರಿ 2014, 19:30 IST
ವೆಲಿಂಗ್ಟನ್‌ನಲ್ಲಿ ಮಂಗಳವಾರ ಕೊನೆಗೊಂಡ ಭಾರತ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ತ್ರಿಶತಕ ಗಳಿಸಿದ ನ್ಯೂಜಿಲೆಂಡ್‌ ತಂಡದ ನಾಯಕ ಬ್ರೆಂಡನ್‌ ಮೆಕ್ಲಮ್‌ ಸಂಭ್ರಮಿಸಿದ ಪರಿ	–ರಾಯಿಟರ್ಸ್‌ ಚಿತ್ರ
ವೆಲಿಂಗ್ಟನ್‌ನಲ್ಲಿ ಮಂಗಳವಾರ ಕೊನೆಗೊಂಡ ಭಾರತ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ತ್ರಿಶತಕ ಗಳಿಸಿದ ನ್ಯೂಜಿಲೆಂಡ್‌ ತಂಡದ ನಾಯಕ ಬ್ರೆಂಡನ್‌ ಮೆಕ್ಲಮ್‌ ಸಂಭ್ರಮಿಸಿದ ಪರಿ –ರಾಯಿಟರ್ಸ್‌ ಚಿತ್ರ   

ವೆಲಿಂಗ್ಟನ್‌ (ಪಿಟಿಐ): ‘ಆರಂಭದಲ್ಲಿ ಕುಸಿತ ಕಂಡು ಸಂಕಷ್ಟಕ್ಕೆ ಸಿಲುಕಿದ್ದ ನಮ್ಮ ತಂಡಕ್ಕೆ ಆಸರೆಯಾದ ಖುಷಿಯಿದೆ. ಆದ್ದರಿಂದ ಇದು ನನ್ನ ಕ್ರಿಕೆಟ್‌ ಜೀವನದ ಸ್ಮರಣೀಯ ಇನಿಂಗ್ಸ್‌’ ಎಂದು ನ್ಯೂಜಿಲೆಂಡ್‌ ತಂಡದ ನಾಯಕ ಬ್ರೆಂಡನ್‌ ಮೆಕ್ಲಮ್‌ ಹರ್ಷ ವ್ಯಕ್ತಪಡಿಸಿದರು.

‘ಬ್ಯಾಟ್‌ ಮಾಡಲು ಬಂದಾಗ ಐದು ವಿಕೆಟ್‌ ಪತನವಾಗಿದ್ದವು. ಆದ್ದರಿಂದ ಒತ್ತಡದಲ್ಲಿಯೇ ಕ್ರೀಸ್‌ಗೆ ಬಂದೆ. ಆ ಒತ್ತಡದಲ್ಲಿಯೇ ಅತ್ಯು ತ್ತಮ ಜೊತೆಯಾಟವಾಡಿದೆ. ಸೋಮವಾರ ರಾತ್ರಿ  ಸ್ಟೀಫನ್‌ ಫ್ಲೆಮಿಂಗ್‌ ಜೊತೆ ಸಾಕಷ್ಟು ಹೊತ್ತು ಚರ್ಚೆ ನಡೆಸಿದ್ದೆ. ಆದ್ದರಿಂದ ಉತ್ತಮ ಇನಿಂಗ್ಸ್‌ ಕಟ್ಟಲು ಸಾಧ್ಯ ವಾಯಿತು’ ಎಂದು ಮೆಕ್ಲಮ್‌ ಹೇಳಿದರು.

ಅವರು ಈ ಪಂದ್ಯದಲ್ಲಿ ಅಮೋಘ ತ್ರಿಶತಕ ಗಳಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದರು.

84 ಟೆಸ್ಟ್ ಆಡಿರುವ ಮೆಕ್ಲಮ್‌  ಒಟ್ಟು 5219 ರನ್‌ ಗಳಿಸಿದ್ದಾರೆ. 2004ರಲ್ಲಿ ಹ್ಯಾಮಿ ಲ್ಟನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಪದಾರ್ಪಣೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.