ADVERTISEMENT

ಸ್ವಾಗತ ಕೋರಿದ ವ್ಲಾದಿಮಿರ್‌ ಪುಟಿನ್‌

ಏಜೆನ್ಸೀಸ್
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST
ಪುಟಿನ್‌
ಪುಟಿನ್‌   

ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಮುಂದಿನ ವಾರ ಆರಂಭವಾಗುವ ಫಿಫಾ ವಿಶ್ವಕಪ್‌ ಟೂರ್ನಿಗೆ ಫುಟ್‌ಬಾಲ್‌ ಅಭಿಮಾನಿಗಳು ಹಾಗೂ ತಂಡಗಳನ್ನು ಸ್ವಾಗತಿಸಿದ್ದಾರೆ.

ಪುಟಿನ್‌ ಅವರು ಮಾಸ್ಕೊದ ಹೃದ ಯ ಭಾಗದಲ್ಲಿರುವ ಕ್ರೆಮ್ಲಿನ್‌ ಸಂಕೀರ್ಣ ಕಟ್ಟದ ಎದುರು ನಿಂತು ಮಾತನಾಡಿದ್ದು, ಆ ವಿಡಿಯೊವನ್ನು ಇಲ್ಲಿನ ಸುದ್ದಿವಾಹಿನಿಯಲ್ಲಿ ಬಿತ್ತರಿಸಲಾಗಿದೆ.

‘ಜಗತ್ತಿನ ಶ್ರೇಷ್ಠ ಫುಟ್‌ಬಾಲ್‌ ತಂಡ ಗಳು ಹಾಗೂ ಅಭಿಮಾನಿಗಳಿಗೆ ಸ್ವಾಗತ. ಫುಟ್‌ಬಾಲ್‌ ಕ್ರೀಡೆಯನ್ನು ಪ್ರೀತಿಸುವ ಎಲ್ಲರನ್ನೂ ಖುಷಿ ಹಾಗೂ ಗೌರವದಿಂದ ರಷ್ಯಾ ಬರಮಾಡಿಕೊಳ್ಳುತ್ತದೆ. ರೊಚಕತೆ ತುಂಬಿದ, ಹಳೆಯ ವೈಭವವನ್ನು ಎತ್ತಿ ಹಿಡಿಯುವ ಟೂರ್ನಿಯಾಗಿ ಈ ವಿಶ್ವಕಪ್‌ ನಡೆಯಬೇಕಿದೆ. ಈ ಟೂರ್ನಿಯನ್ನು ವೀಕ್ಷಿಸಲು ಬರುವ ನಿಮಗೆ ಈ ಮಾಂತ್ರಿಕ ಕ್ರೀಡೆಯು ಮರೆಯಲಾರದ ಅನುಭವಗಳನ್ನು ನೀಡಲಿ’ ಎಂದು ಪುಟಿನ್‌ ಹೇಳಿದ್ದಾರೆ.

ADVERTISEMENT

‘ರಷ್ಯಾದ ಭವ್ಯ ಸಂಸ್ಕೃತಿ ಹಾಗೂ ಇತಿಹಾಸವನ್ನು ಅರಿತುಕೊಳ್ಳಲು ಇದೊಂದು ಉತ್ತಮ ಅವಕಾಶ. ಅಪಾರ ನೈಸರ್ಗಿಕ ಸಂಪತ್ತು ಹೊಂದಿರುವ ರಷ್ಯಾ ನಿಮಗೆ ನಿರಾಸೆ ತರಿಸುವುದಿಲ್ಲ’ ಎಂದೂ ಅವರು ತಿಳಿಸಿದ್ದಾರೆ.

‘ಒಂದು ತಿಂಗಳ ಕಾಲ ಇಲ್ಲಿಗೆ ಬರುವ ಲಕ್ಷಾಂತರ ಜನರಿಗೆ ಎಲ್ಲ ರೀತಿಯ ಭದ್ರತೆ ಕಲ್ಪಿಸಲಾಗಿದೆ. ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಅಭಿಮಾನಿಗಳಿಗೆ ರಷ್ಯಾ ಅವರದೇ ತವರು ರಾಷ್ಟ್ರ ಎಂಬ ಭಾವನೆ ಮೂಡಬೇಕು. ಅದಕ್ಕಾಗಿ ನಮ್ಮ ಶಕ್ತಿ ಮೀರಿ ತಯಾರಿ ಮಾಡಿಕೊಂಡಿದ್ದೇವೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.