ADVERTISEMENT

ಹಾಕಿ: ಅಂತಿಮ ಹಂತಕ್ಕೆ ಭಾರತ ಕ್ರೀಡಾ ಪ್ರಾಧಿಕಾರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST

ಬೆಂಗಳೂರು: ಉತ್ತಮ ಪ್ರದರ್ಶನ ತೋರಿದ ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) `ಎ' ತಂಡ ಡಿ.ಎಸ್.ಮೂರ್ತಿ ಹಾಗೂ ವಿ.ಕರುಣಾಕರಣ್ ಸ್ಮಾರಕ ಹಾಕಿ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ 5-1 ಗೋಲುಗಳಿಂದ ಆರ್‌ಡಬ್ಲ್ಯುಎಫ್ ವಿರುದ್ಧ ಭರ್ಜರಿ ಗೆಲುವು ಪಡೆದು ಅಂತಿಮ ಹಂತಕ್ಕೆ ಮುನ್ನಡೆಯಿತು.

ಅಕ್ಕಿತಿಮ್ಮನ ಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಡಬ್ಲ್ಯುಎಫ್ ತಂಡದ ಪ್ರದೀಪ್ 8ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಗೋಲಿನ ಖಾತೆ ತೆರೆದರು. ವಿಜಯಿ ತಂಡದ ಪ್ರಧಾನ್ ಸೋಮಣ್ಣ (15ನೇ ನಿ.) ಗೋಲು ಬಾರಿಸಿ ಸಮಬಲ ಸಾಧಿಸಿದರು. ಬಳಿಕ ದರ್ಶನ್ (34, 49ನೇ ನಿ.) ಎರಡು ಮತ್ತು ದೀಪಕ್ ಬಿಜವಾಡ (42ನೇ ನಿ.) ಹಾಗೂ ಬಿಜು (54ನೇ ನಿ.) ತಂಡದ ಪರ ತಲಾ ಒಂದೊಂದು ಗೋಲು ತಂದಿತ್ತರು.

ದಿನದ ಮತ್ತೊಂದು ಪಂದ್ಯದಲ್ಲಿ ಸಮಬಲ ಪ್ರದರ್ಶನ ತೋರಿದ ಭಾರತ ಕೀಡಾ ಪ್ರಾಧಿಕಾರ `ಬಿ' ಹಾಗೂ ಕೆನರಾ ಬ್ಯಾಂಕ್ ತಂಡಗಳು 1-1ರಲ್ಲಿ ಡ್ರಾ ಸಾಧಿಸಿದವು.

ಎಚ್‌ಎಎಲ್, ಪಿಸಿಟಿಸಿ ಹಾಗೂ ಕೆನರಾ ಬ್ಯಾಂಕ್ ತಂಡಗಳು ಸಹ ಅಂತಿಮ ಹಂತಕ್ಕೆ ಅರ್ಹತೆ ಗಿಟ್ಟಿಸಿವೆ.

ಬುಧವಾರದ ಪಂದ್ಯಗಳಲ್ಲಿ ಎಂಇಜಿ ಬಾಯ್ಸ- ಎಸ್‌ಐಎ `ಎ' ಹಾಗೂ ಆರ್‌ಡಬ್ಲ್ಯುಎಫ್-ಪ್ರಿಮ್‌ರೋಸ್ ತಂಡಗಳು ಪೈಪೋಟಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.