ADVERTISEMENT

ಹಾಕಿ ಆಟಗಾರರಿಗೆ ಐಪಾಡ್!

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಬೆಂಗಳೂರು: ಲಂಡನ್        ಒಲಿಂಪಿಕ್ಸ್‌ನಲ್ಲಿ ಆಡಲು ಅರ್ಹತೆ ಪಡೆದಿರುವ ಭಾರತ ಹಾಕಿ ತಂಡದ ಆಟಗಾರರ ಅದೃಷ್ಟ ಖುಲಾಯಿಸಿದೆ. ನಗದು ಬಹುಮಾನದ ಜೊತೆ ಇತರ ಸೌಲಭ್ಯಗಳೂ ಇವರಿಗೆ ಸಿಗುತ್ತಿವೆ.
ತಂಡದ ಪ್ರತಿ ಆಟಗಾರರಿಗೆ ಐಪಾಡ್ ನೀಡಲು ಹಾಕಿ ಇಂಡಿಯಾ ನಿರ್ಧರಿಸಿದೆ. ಈ ವಿಷಯವನ್ನು ಅಧ್ಯಕ್ಷ ನರೀಂದರ್ ಬಾತ್ರಾ ಖಚಿತಪಡಿಸಿದ್ದಾರೆ.

`ಭಾರತ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ತಕ್ಷಣ ಆಟಗಾರರಿಗೆ ತಲಾ ಒಂದು ಲಕ್ಷ ರೂ. ಹಾಗೂ ಸಿಬ್ಬಂದಿಗೆ ತಲಾ 50 ಸಾವಿರ ರೂ. ನೀಡುವುದಾಗಿ ಲಲಿತ್ ಹೋಟೆಲ್ ಸಮೂಹದ ಲಲಿತ್ ಸೂರಿ ಪ್ರಕಟಿಸಿದ್ದರು. ಹಾಕಿ ಇಂಡಿಯಾ ಕೂಡ ಇಷ್ಟೇ ಮೊತ್ತದ ಬಹುಮಾನ ಪ್ರಕಟಿಸಿತ್ತು. ಆದರೆ ಐಪಾಡ್ ಬೇಕೆಂದು ಆಟಗಾರರು ಮನವಿ ಮಾಡಿದರು. ಹಾಗಾಗಿ ಎಲ್ಲಾ ಆಟಗಾರರಿಗೆ ಐ ಪಾಡ್ ಹಾಗೂ ನಗದು ಬಹುಮಾನವನ್ನು ಕೊಡಲು ನಾವು ನಿರ್ಧರಿಸಿದ್ದೇವೆ~ ಎಂದು ಬಾತ್ರಾ ಹೇಳಿದ್ದಾರೆ.

ಈ ಬಗ್ಗೆ ಆಟಗಾರರು ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ದಕ್ಷಿಣ ಕೇಂದ್ರದಲ್ಲಿ ಈಗ ಆಟಗಾರರು ತರಬೇತಿ ನಿರತರಾಗಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಐಪಾಡ್ ಹಾಗೂ ನಗದು ಬಹುಮಾನವನ್ನು ಆಟಗಾರರಿಗೆ ನೀಡಲಾಗುತ್ತಿದೆ.

ಕಳೆದ ತಿಂಗಳು ನವದೆಹಲಿಯಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಟೂರ್ನಿಯ ಫೈನಲ್‌ನಲ್ಲಿ ಭಾರತ 8-1 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಸೋಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.